ಗಾಂಧಿವಿರೋಧಿಗಳ ಕೈಯಿಂದ ಗಾಂಧೀಜಿಯನ್ನು ವಾಪಸ್ ಪಡೆಯಬೇಕಿದೆ: ಪಿಣರಾಯಿ

Update: 2016-10-03 05:57 GMT

ತಿರುವನಂತಪುರಂ,ಅ.3: ಗಾಂಧಿ ವಿರೋಧಿಗಳ ಮತ್ತು ಕೋಮುವಾದಿಗಳ ಕೈಯಿಂದ ಗಾಂಧೀಜಿಯನ್ನು ಮರುವಶಕ್ಕೆ ಪಡೆಯಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆಂದು ವರದಿಯಾಗಿದೆ. ಇಲ್ಲಿನ ವಿಜಿಟಿ ಹಾಲ್‌ನಲ್ಲಿ ಗಾಂಧಿಜಯಂತಿಯಂದು ರಾಜ್ಯಮಟ್ಟದ ಗಾಂಧಿಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.

ಅಹಿಂಸೆಯನ್ನು ಗಟ್ಟಿಯಾಗಿ ಹಿಡಿದರೂ ಗಾಂಧೀಜಿ, ಅಕ್ರಮಕ್ಕೆ ಬಲಿಯಾಗುವವರನ್ನು ಪ್ರತಿರೋಧಕ್ಕೆ ತಳ್ಳಿಹಾಕಲಿಲ್ಲ. ಅನಿವಾರ್ಯವಾದ ಪ್ರತಿರೋಧಕ್ಕಿಂತ ಆಚೆಯಿರುವ ಅಕ್ರಮಗಳನ್ನು ಅವರು ವಿರೋಧಿಸಿದ್ದಾರೆ. ಗಾಂಧಿಯ ಅಹಿಂಸೆಗೆ ಬಹುಮುಖ ಅರ್ಥಗಳಿದ್ದವು. ಅವು ಶೋಷಣೆ, ಆರ್ಥಿಕ ಅಸಮಾನತೆ, ಸಾಮಾಜಿಕ, ಪ್ರಾಕೃತಿಕ ಶೋಷಣೆ ಪರಿಸರದ ವಿರುದ್ಧ ಅಕ್ರಮಗಳು ಇವೇ ಮೊದಲಾದುವು ಆಗಿವೆ.

ಅದೇ ರೀತಿ ಅಸಮಾನತೆಯಿಂದ ಬಿಡುಗಡೆಯನ್ನು ಗಾಂಧೀಜಿಯ ಗ್ರಾಮಸ್ವರಾಜ್ ತತ್ವ ಸೂಚಿಸುತ್ತದೆ.

ಆದರೆ ಇಂದು ಗಾಂಧೀಜಿ ಸ್ವಾರ್ಥಹಿತಾಸಕ್ತಿಗಳಿಗೆ ಬಳಕೆಯಾಗುತ್ತಿದ್ದಾರೆ. ಅದರಂತೆ ಅಂಬೇಡ್ಕರ್, ಸರ್ದಾರ್ ಪಟೇಲ್ ಮುಂತಾದ ರಾಷ್ಟ್ರ ನಾಯಕರನ್ನು ಇತಿಹಾಸ ಸಂದರ್ಭಗಳಿಂದ ಬದಲಾಯಿಸಿ ಕೋಮುವಾದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.ಇವು ಅಸಹಿಷ್ಣುತೆ ನಿಧಾನವಾಗಿ ಅಧಿಪತ್ಯವನ್ನು ಪಡೆದುಕೊಳ್ಳುತ್ತಿರುವ ದೃಶ್ಯವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News