ಇಂದೋರ್ ಟೆಸ್ಟ್: ನಿರಾಸೆಗೊಳಿಸಿದ ಗಂಭೀರ್

Update: 2016-10-08 05:55 GMT

 ಇಂದೋರ್, ಅ.8: ನ್ಯೂಝಿಲೆಂಡ್ ವಿರುದ್ಧ ಶನಿವಾರ ಇಲ್ಲಿ ಆರಂಭವಾದ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅಂತಿಮ 11ರ ಬಳಗದಲ್ಲಿ ಆಡುವ ಅವಕಾಶ ಪಡೆದಿದ್ದ ಭಾರತದ ಹಿರಿಯ ಆರಂಭಿಕ ದಾಂಡಿಗ ಗೌತಮ್ ಗಂಭೀರ್ ಕೇವಲ 29 ರನ್ ಗಳಿಸಿ ಔಟಾದರು.

ಸುಮಾರು 2 ವರ್ಷಗಳ ಬಳಿಕ ಟೀಮ್ ಇಂಡಿಯಾಕ್ಕೆ ವಾಪಸಾಗಿದ್ದ ದಿಲ್ಲಿಯ ಎಡಗೈ ಬ್ಯಾಟ್ಸ್‌ಮನ್ ಗಂಭೀರ್ ತನಗೆ ಲಭಿಸಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿಫಲರಾದರು.

ಇಲ್ಲಿನ ಹೋಳ್ಕರ್ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಶಿಖರ್ ಧವನ್ ಗಾಯಗೊಂಡಿರುವ ಕಾರಣ ಬಹುದಿನದ ಬಳಿಕ ಮುರಳಿ ವಿಜಯ್ ಅವರೊಂದಿಗೆ ಭಾರತದ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದ ಗಂಭೀರ್ ದೊಡ್ಡ ಮೊತ್ತ ಗಳಿಸದೇ ನಿರಾಸೆಗೊಳಿಸಿದರು.

ಮುರಳಿಯೊಂದಿಗೆ ಮೊದಲ ವಿಕೆಟ್‌ಗೆ 26 ರನ್ ಹಾಗೂ ಚೇತೇಶ್ವರ ಪೂಜಾರರೊಂದಿಗೆ 2ನೆ ವಿಕೆಟ್‌ಗೆ 36 ರನ್ ಜೊತೆಯಾಟ ನಡೆಸಿದ ಗಂಭೀರ್ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ಬೀಸಿದ ಎಲ್‌ಬಿಡಬ್ಲು ಬಲೆಗೆ ಬೀಳುವ ಮೊದಲು 53 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದ್ದರು.

ಭಾರತ 21 ಓವರ್‌ಗಳಲ್ಲಿ 61 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದು, ನಾಯಕ ಕೊಹ್ಲಿ ಹಾಗೂ ಪೂಜಾರ ಕ್ರೀಸ್ ಕಾಯ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News