ಭಾರತ ಮತ್ತು ಪಾಕಿಸ್ತಾನಗಳಿಗೆ ಯುದ್ಧವು ಆಯ್ಕೆಯಲ್ಲ: ಜಿಲಾನಿ

Update: 2016-10-10 09:48 GMT

ವಾಷಿಂಗ್ಟನ್,ಅ.10: ಭಾರತ ಮತ್ತು ಪಾಕಿಸ್ತಾನಗಳಿಗೆ ಯುದ್ಧವು ಒಂದು ಆಯ್ಕೆಯಲ್ಲ ಎಂದು ಪ್ರತಿಪಾದಿಸಿರುವ ಅಮೆರಿಕಕ್ಕೆ ಪಾಕಿಸ್ತಾನದ ರಾಯಭಾರಿ ಜಲೀಲ್ ಅಬ್ಬಾಸ್ ಜಿಲಾನಿ ಅವರು, ಕಾಶ್ಮೀರ ಸೇರಿದಂತೆ ಎಲ್ಲ ದ್ವಿಪಕ್ಷೀಯ ವಿವಾದಗಳನ್ನು ಮಾತುಕತೆಗಳ ಮೂಲಕ ಬಗೆಹರಿಸುವ ಅಗತ್ಯವಿದೆ ಎಂದು ಪಾಕ್ ಬಲವಾಗಿ ನಂಬಿದೆ ಎಂದು ಹೇಳಿದ್ದಾರೆ.

ಇಲ್ಲಿ ವಿಶ್ವಬ್ಯಾಂಕ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವಾರ್ಷಿಕ ಸಭೆಯ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಉಭಯ ರಾಷ್ಟ್ರಗಳಿಗೆ ಆರ್ಥಿಕ ಅಭಿವೃದ್ಧಿಯ ಅಗತ್ಯವಿದೆ ಮತ್ತು ಅವು ಜನರ ಏಳಿಗೆಗಾಗಿ ಶ್ರಮಿಸಬೇಕಾಗಿದೆ. ಹೀಗಾಗಿ ಯುದ್ಧಕ್ಕೆ ಮುಂದಾಗುವುದು ಸೂಕ್ತ ಆಯ್ಕೆಯೇ ಅಲ್ಲ. ವಿಶೇಷವಾಗಿ ಎರಡು ಪರಮಾಣು ಶಕ್ತ ರಾಷ್ಟ್ರಗಳ ನಡುವೆ ಯುದ್ಧ ನಡೆಯಲೇಬಾರದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News