ಸರಕಾರಿ ರಜಾದಿನದಂದೂ ವೀಸಾ ಕೊಡಿಸಿದ ಸುಶ್ಮಾ

Update: 2016-10-12 13:34 GMT

ಹೊಸದಿಲ್ಲಿ, ಅ.12: ಟ್ವೀಟ್ ಒಂದಕ್ಕೆ ಸ್ಪಂದಿಸಿದ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್, ರಜಾ ದಿನವಾದರೂ ದೂತವಾಸವನ್ನು ತೆರೆಸಿ, ಮಗನೊಬ್ಬನಿಗೆ ತನ್ನ ತಂದೆಯ ಅಂತ್ಯಕ್ರಿಯೆ ನಡೆಸಲು ಸಹಾಯ ಮಾಡಿದ್ದಾರೆ.

ಅಕ್ಟೋಬರ್ 10ರಂದು ಟ್ವಿಟರ್ ಬಳಕೆದಾರೆ ಸರಿತಾ ಟಕ್ರು ಎಂಬ ಮಹಿಳೆ ಸುಶ್ಮಾರನ್ನು ಸಂಪರ್ಕಿಸಿ, ತನ್ನ ಪತಿಯ ನಿಧನ ವಾರ್ತೆಯನ್ನು ತಿಳಿಸಿದ್ದರು. ಅವರ ಅಂತ್ಯಕ್ರಿಯೆ ನಡೆಸಬೇಕಾದ ಏಕೈಕ ಪುತ್ರ ಅಮೆರಿಕದಲ್ಲಿದ್ದಾನೆ. ಆದರೆ, ದೂತವಾಸಕ್ಕೆ ರಜೆಯಿರುವ ಕಾರಣ ಅ.13ರ ವರೆಗೆ ಅತನಿಗೆ ವೀಸಾ ದೊರೆಯುವುದು ಅಸಾಧ್ಯವಾಗಿದೆ. ಅಲ್ಲಿನ ಗುರುವಾರದ ಮೊದಲು ವೀಸಾ ಪಡೆಯಲು ಸಹಾಯ ಮಾಡಬೇಕು. ಕಾಯುವ ಕಷ್ಟವನ್ನು ನಿವಾರಿಸಬೇಕೆಂದು ಅವರು ಸುಶ್ಮಾರನ್ನು ವಿನಂತಿಸಿದ್ದರು.

ಕೂಡಲೇ ಕಾರ್ಯರಂಗಕ್ಕೆ ಧುಮುಕಿದ ಸುಶ್ಮಾ, ರಜಾ ದಿನವಾಗಿದ್ದರೂ, ಸರಿತಾರ ಪುತ್ರ ಅಭಯ್ ಕೌಲ್‌ಗೆ ಭಾರತದ ವೀಸಾ ಲಭಿಸುವಂತೆ ಮಾಡಿದ್ದಾರೆ.

ವಿದೇಶಾಂಗ ಸಚಿವಾಲಯವು ಟ್ವೀಟ್‌ನಷ್ಟೇ ದೂರವೆಂಬುದನ್ನು ಖಾತ್ರಿಪಡಿಸಿರುವ ಸುಶ್ಮಾ ಈ ರೀತಿ ಮಾನವೀಯ ಸಹಾಯ ಮಾಡಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅವರು 20 ಮಂದಿ ಪಾಕಿಸ್ತಾನಿ ಹುಡುಗಿಯರಿಗೆ ಸುರಕ್ಷಿತವಾಗಿ ದೇಶ ಸೇರಲು ನೆರವಾಗಿದ್ದರು.

‘‘ನಿಮ್ಮ ಕ್ಷೇಮದ ಬಗ್ಗೆ ನನಗೆ ಕಾಳಜಿಯಿದೆ. ಏಕೆಂದರೆ ಒಬ್ಬನ ಮಗಳು ಪ್ರತಿಯೊಬ್ಬನ ಮಗಳಾಗಿರುತ್ತಾಳೆ’’ ಎಂದವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News