ಸಿಧು ನಾಯಕತ್ವಕ್ಕೆ ನಾಲಾಯಕ್ಕು: ವಿರೋಧ ಪಕ್ಷಗಳ ಟೀಕೆ

Update: 2016-10-16 12:13 GMT

ಫರೀದ್‌ಕೋಟ್, ಅಕ್ಟೋಬರ್ 16: ನವಜೋತ್ ಸಿಂಗ್ ಸಿಧು, ಬಿಜೆಪಿಗೆ ರಾಜಿನಾಮೆ ನೀಡಿದ ಬಳಿಕ ಪಂಜಾಬ್‌ನ ರಾಜಕೀಯ ಕಾವೇರುತ್ತಿದೆ. ಬಿಜೆಪಿಗೆ ರಾಜಿನಾಮೆ ಕೊಟ್ಟು ನಾಲ್ಕನೆ ರಂಗ ಆವಾಝ್-ಎ-ಪಂಜಾಬ್ ಮೂಲಕ ರಾಜಕೀಯದಲ್ಲಿ ಹೊಸಪಾಳಿಯನ್ನು ಆರಂಭಿಸಲು ಸಿದ್ಧರಾಗಿರುವ ಸಿದ್ಧವಿರುದ್ಧ ವಿರೋಧ ಪಕ್ಷ ಟೀಕಾಪ್ರಹಾರನಡೆಸುತ್ತಿವೆ ಎಂದು ವರದಿಯೊಂದು ತಿಳಿಸಿದೆ.

 ಅಕಾಲಿದಳ ನಾಯಕರು ಸಿಧು ನಾಯಕತ್ವಕ್ಕೆ ಸೂಕ್ತವ್ಯಕ್ತಿಯಲ್ಲ ಎಂದು ಟೀಕಿಸಿದ್ದರೆ ಬಿಎಸ್ಪಿನಾಯಕರೊಬ್ಬರು ಸಿಧುವನ್ನು ಅವರೊಬ್ಬನಾಟಕಕಾರ ಎಂದು ಕರೆದಿದ್ದಾರೆ. ಅಕಾಲಿದಳ ನಾಯಕ ಸ್ವರೂಪ್ ಚಂದ್ ಸಿಂಗ್ಲಾ ಸಿದ್ದು ನಾಯಕತ್ವಕ್ಕೆ ನಾಲಾಯಕ್ಕು ಎಂದು ಘರ್ಜಿಸಿದ್ದಾರೆ. ಬಿಎಸ್ಪಿಯ ಪಂಜಾಬ್ ಮುಖ್ಯಸ್ಥ ರಚಪಾಲ್ ರಾಜು ಸಿಧು ನಂಬರರ ಒನ್ ಡ್ರಮೇಬಾಜ್ ಎಂದು ಹೀಗಳೆದಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News