ಶೃಂಗಾರ ಕಾವ್ಯಗಳಿಂದ ಕನ್ನಡ ಸಾಹಿತ್ಯಕ್ಕೆಆಧುನಿಕ ಸ್ಪರ್ಶ

Update: 2016-10-18 18:40 GMT

ಬೆಂಗಳೂರು, ಅ.18: ಸಾಹಿತಿ ಕೆ.ಎಸ್. ನರಸಿಂಹಸ್ವಾಮಿಯವರ ಶೃಂಗಾರ ಕಾವ್ಯ ಗಳು ಕನ್ನಡ ಸಾಹಿತ್ಯಕ್ಕೆ ಆಧುನಿಕ ಸ್ಪರ್ಶ ತಂದು ಕೊಟ್ಟವು ಎಂದು ಹಿರಿಯ ಸಾಹಿತಿ ಜಿ.ಎಸ್.ಸಿದ್ದಲಿಂಗಯ್ಯ ತಿಳಿಸಿದರು.

ಮಂಗಳವಾರ ನಗರದ ಕಲಾ ಕಾಲೇಜಿನಲ್ಲಿ ನ್ನಡ ಸಂಘ ಆಯೋಜಿಸಿದ್ದ ಕೆ.ಎಸ್.ನರಸಿಂಹ
ಸ್ವಾಮಿ ಮತ್ತು ಎಂ.ಎಸ್.ಸುಬ್ಬುಲಕ್ಷ್ಮೀ ಜನ್ಮ ಶತಮಾನೋತ್ಸವ ಹಾಗೂ ರಂಗ ಗೌರವ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ೆ.ಎಸ್.ನರಸಿಂಹಸ್ವಾಮಿಯವರು ಕಾವ್ಯ ಜೀವನ ಪ್ರಾರಂಭಿಕ ಘಟ್ಟದಲ್ಲಿ ಶೃಂಗಾರ ಕಾವ್ಯಗಳ ರಚನೆಗೆ ಹೆಚ್ಚು ಆದ್ಯತೆ ನೀಡಿದರು. ಈ ಶೃಂಗಾರ ಕಾವ್ಯಗಳ ರಚನೆಯಿಂದ ಕನ್ನಡ ಸಾಹಿತ್ಯ ಆಧುನಿಕ ಸ್ಪರ್ಶ ಪಡೆದುಕೊಂಡಿತ್ತು. ಇದರಿಂದ ಹೊಸಗನ್ನಡ ಕಾವ್ಯ ಇಷ್ಟು ಎತ್ತರಕ್ಕೆ ಬೆಳೆದಿದೆ. ಹಾಗೆಯೇ ಕೊನೆ ಘಟ್ಟದಲ್ಲಿ ಲೋಕ ಜೀವನದ ತಲ್ಲಣಗಳ ಕುರಿತು ಬರೆದರು ಎಂದು ತಿಳಿಸಿದರು.ಣ್ಣು ಕಾಣುವಾಗ 10ಕ್ಕೂ ಅಕ ಕಾವ್ಯ ಗಳನ್ನು ರಚಿಸಿದ್ದ ಕೆಎಸ್‌ಎನ್,ದೃಷ್ಟಿಹೀನವಾದ ನಂತರ ಆರು ಕಾವ್ಯಗಳನ್ನು ರಚಿಸಿದ್ದಾರೆ. ಕಾವ್ಯ ರಚನೆಗೆ ಮನಸ್ಥಿತಿ ಬೇಕೇ ವಿನಃ ದೃಷ್ಟಿ ಅಲ್ಲ ಂಬುದನ್ನು ತೋರಿಸಿಕೊಟ್ಟರು. ಹೀಗಾಗಿಯೇ ನರಸಿಂಹಸ್ವಾಮಿಯವರು ನವ್ಯ ಕವಿಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದರು.ಾನಕೋಗಿಲೆ ಎಂ.ಎಸ್. ಸುಬ್ಬುಲಕ್ಷ್ಮೀ ಶಾರೀರಿಕವಾಗಿ ಶೃತಿಬದ್ಧವಾಗಿದ್ದರು. ಇವರಿಗೆ ಸಂಗೀತವೇ ವಿಶೇಷ ಭಾಷೆ ಆಗಿತ್ತು. ಇವರ ನಾಲಗೆ ಮೇಲೆ ರಾಗ ಹಾಸುಹೊಕ್ಕಾಗಿ ಹರಡಿಕೊಂಡಿತ್ತು. ಸುಬ್ಬುಲಕ್ಷ್ಮೀ ಗಾಯನಕ್ಕೆ ಎಲ್ಲರ ತಲೆಯನ್ನು ತೂಗಿಸುವ ಶಕ್ತಿ ಇತ್ತು ಎಂದು ಬಣ್ಣಿಸಿದರು.
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತ
ನಾಡಿ, ಸರಕಾರಿ ಶಾಲೆಗಳಲ್ಲಿ ನುರಿತ ಇಂಗ್ಲಿಷ್ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಸರಕಾರ ನುರಿತ ಶಿಕ್ಷಕರನ್ನು ನೇಮಿ ಸಲು, ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ವಿಶ್ವಾಸ ಮೂಡಿಸಲು ಪ್ರಯತ್ನಿಸಬೇಕು. ಈ ಮೂಲಕ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಬಹುದು ಎಂದು ಅಭಿಪ್ರಾಯಪಟ್ಟರು.ಾರ್ಯಕ್ರಮದಲ್ಲಿ ರಂಗ ಗೌರವ ಪ್ರಶಸ್ತಿಯನ್ನು ಕಲಾವಿದ ದಿವಟ್ಟಿಗೆ ಎಲ್.ಕೃಷ್ಣಪ್ಪ ವರಿಗೆ ಪ್ರದಾನಿಸಲಾಯಿತು. ಈ ವೇಳೆ ಾಲೇಜಿನ ಪ್ರಾಂಶುಪಾಲ ಕೆ.ಎಂ.ವೆಂಕಟ
ಸ್ವಾಮಿ ರೆಡ್ಡಿ, ಕನ್ನಡ ವಿಭಾಗದ ಪ್ರಾಧ್ಯಾಪಕ ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News