ಐಸಿಸ್ ಮಾನವ ಗುರಾಣಿಗಳಾಗಿ 550 ಕುಟುಂಬ: ವಿಶ್ವಸಂಸ್ಥೆ

Update: 2016-10-21 18:46 GMT

ಜಿನೇವ, ಅ. 21: ಐಸಿಸ್ ಭಯೋತ್ಪಾದಕರು ಮೊಸುಲ್‌ನ ಸುತ್ತಮುತ್ತಲಿನ ಗ್ರಾಮಗಳ ಸುಮಾರು 550 ಕುಟುಂಬಗಳನ್ನು ನಗರದಲ್ಲಿರುವ ಐಸಿಸ್ ನೆಲೆಗಳ ಸಮೀಪ ಮಾನವ ಗುರಾಣಿಗಳಾಗಿ ಇಟ್ಟುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಚೇರಿ ಶುಕ್ರವಾರ ಹೇಳಿದೆ.
‘‘ಮೊಸುಲ್‌ನತ್ತ ಇರಾಕ್ ಪಡೆಗಳು ಆಗಮಿಸುತ್ತಿರುವಂತೆಯೇ, ಮೊಸುಲ್ ಮತ್ತು ಅದರ ಸುತ್ತಮುತ್ತಲಿನ ನಾಗರಿಕರನ್ನು ಐಸಿಸ್ ಭಯೋತ್ಪಾದಕರು ತಮ್ಮ ಕಚೇರಿಗಳು ಅಥವಾ ನೆಲೆಗಳ ಸಮೀಪ ಮಾನವ ಗುರಾಣಿಗಳನ್ನಾಗಿ ಇರಿಸಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಇದು, ಐಸಿಸ್ ಭಯೋತ್ಪಾದಕರು ಮತ್ತು ಇರಾಕ್ ಪಡೆಗಳ ನಡುವಿನ ಸಂಘರ್ಷದಲ್ಲಿ ನಾಗರಿಕರ ಸಾವು ನೋವಿಗೆ ಕಾರಣವಾಗಲಿದೆ’’ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್ ಝಾಯಿದ್ ರಆದ್ ಅಲ್ ಹುಸೈನ್ ಹೇಳಿಕೆಯೊಂದರಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News