ದಿಲ್ಲಿ ವಿರುದ್ಧ ಕರ್ನಾಟಕಕ್ಕೆ 324 ರನ್‌ಗಳ ಮುನ್ನಡೆ

Update: 2016-10-21 18:51 GMT

 ಕೋಲ್ಕತಾ, ಅ.21: ಐತಿಹಾಸಿಕ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ದಿಲ್ಲಿ ವಿರುದ್ಧ ಕರ್ನಾಟಕ ತಂಡ 324 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದೆ.

 ಪಂದ್ಯದ ಎರಡನೆ ದಿನವಾಗಿರುವ ಇಂದು ದಿನದಾಟದಂತ್ಯಕ್ಕೆ ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ 141.3 ಓವರ್‌ಗಳಲ್ಲಿ 414 ರನ್‌ಗಳಿಗೆ ಆಲೌಟಾಗಿದ್ದು.ದಿಲ್ಲಿ ವಿರುದ್ಧ ಮೇಲುಗೈ ಸಾಧಿಸಿದೆ.
  ಮೊದಲ ದಿನದಾಟದಂತ್ಯಕ್ಕೆ 52 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 131 ರನ್ ಗಳಿಸಿದ್ದ ಕರ್ನಾಟಕ ಎರಡನೆ ದಿನದ ಆಟ ಮುಂದುವರಿಸಿ ಈ ಮೊತ್ತಕ್ಕೆ 283 ರನ್ ಸೇರಿಸಿತು.
 ಮೊದಲ ದಿನದಾಟದಂತ್ಯಕ್ಕೆ 3 ರನ್ ಗಳಿಸಿ ಕ್ರೀಸ್‌ನಲ್ಲಿ ನಾಯಕ ನಾಯಕ ಕರುಣ್ ನಾಯರ್ ಅರ್ಧಶತಕ (53) ಮತ್ತು 7 ರನ್ ಗಳಿಸಿದ್ದ ಅಭಿಮನ್ಯು ಮಿಥುನ್ ಈ ಮೊತ್ತಕ್ಕೆ 5 ರನ್ ಸೇರಿಸಿ ಔಟಾದರು.
 ಎರಡನೆ ದಿನದ ಆಟ ಮುಂದುವರಿಸಿದ ನಾಯರ್ ಮತ್ತು ಮಿಥುನ್‌ಗೆ ದಿಲ್ಲಿಯ ಬೌಲರ್‌ಗಳ ಸಂಘಟಿತ ದಾಳಿ ಸವಾಲಾಗಿ ಸವಾಲಾಗಿ ಪರಿಣಮಿಸಿತು. 53.3ನೆ ಓವರ್‌ನಲ್ಲಿ ಮಿಥುನ್(12) ಅವರು ಇಶಾಂತ್ ಶರ್ಮ ಓವರ್‌ನಲ್ಲಿ ವಿಕೆಟ್ ಕೀಪರ್ ಪಂತ್‌ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಇಶಾಂತ್ ಶರ್ಮ ಈ ಪಂದ್ಯದಲ್ಲಿ ಮೊದಲ ಯಶಸ್ಸು ಸಿಕ್ಕಿತು. ಆದರೆ ಬಳಿಕ ಅವರಿಗೆ ವಿಕೆಟ್ ದೊರೆಯಲಿಲ್ಲ.
  ದಿಲ್ಲಿಯ ಪವನ್ ಸುಯಾಲ್(80ಕ್ಕೆ4) ಮತ್ತು ವಿಕಾಸ್ ಟೋಕಸ್ (81ಕ್ಕೆ 3) ಅವರು ಕರ್ನಾಟಕದ ದಾಂಡಿಗರನ್ನು ಕಾಡಿದರು. ನಾಯಕ ನಾಯರ್‌ಗೆ ಐದನೆ ವಿಕೆಟ್‌ಗೆ ಮೀರ್ ಕೌನೇನ್ ಅಬ್ಬಾಸ್ ಜೊತೆಯಾದರು. ಇವರು ದಿಲ್ಲಿ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. 89 ರನ್‌ಗಳ ಜೊತೆಯಾಟ ನೀಡಿದರು.
  76.3ನೆ ಓವರ್‌ನಲ್ಲಿ ನಾಯರ್ ಅವರು ವರುಣ್ ಸೂದ್ ಎಸೆತದಲ್ಲಿ ರಿಟರ್ನ್ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಾಯರ್ 136 ನಿಮಿಷಗಳ ಬ್ಯಾಟಿಂಗ್‌ನಲ್ಲಿ 53 ರನ್(88ಎ, 5ಬೌ,2ಸಿ) ಗಳಿಸಿದರು. 52 ರನ್(115ಎ, 6ಬೌ) ಗಳಿಸಿದ ಅಬ್ಬಾಸ್‌ರನ್ನು ವರುಣ್ ಸೂದ್ ಎಲ್‌ಬಿಡಬ್ಲು ಬಲೆಗೆ ಕೆಡವಿದರು.ಸ್ಟುವರ್ಟ್ ಬಿನ್ನಿ (32)ಅವರನ್ನು ವಿಕಾಸ್ ಟೋಕಸ್ ಎಲ್‌ಬಿಡಬ್ಲು ಬಲೆಗೆ ಕೆಡವಿದರು.
ಎಸ್.ಗೋಪಾಲ್ (46) ಅರ್ಧಶತಕದ ಹಾದಿಯಲ್ಲಿದ್ದಾಗ ಮನನ್ ಶರ್ಮ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್‌ಗೆ ಹಿಂತಿರುಗಿದರು.ಕೆ.ಗೌತಮ್ (8) ಮತ್ತು ಎಸ್.ಅರವಿಂದ್(14) ಅವರನ್ನು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವರುಣ್ ಸೂದ್ ಅವಕಾಶ ನೀಡಲಿಲ್ಲ.

ವಿಕೆಟ್ ಕೀಪರ್ ಸಿಎಂ ಗೌತಮ್ 63 ರನ್(208ನಿ, 143ಎ,9ಬೌ) ಗಳಿಸಿ ಅಜೇಯರಾಗಿ ಉಳಿದರು. ದಿಲ್ಲಿ ತಂಡ ವರುಣ್ ಸೂದ್ 80ಕ್ಕೆ 4 , ಟೋಕಸ್ 81ಕ್ಕೆ 3, ಇಶಾಂತ್ ಶರ್ಮ, ಸುಯಾಲ್, ಮನನ್ ಶರ್ಮ ತಲಾ 1 ವಿಕೆಟ್ ಪಡೆದರು.
,,,,,,,,,,,,

ಸ್ಕೋರ್ ಪಟ್ಟಿ
ದಿಲ್ಲಿ ಮೊದಲ ಇನಿಂಗ್ಸ್ 35.5 ಓವರ್‌ಗಳಲ್ಲಿ ಆಲೌಟ್ 90
ಕರ್ನಾಟಕ ಮೊದಲ ಇನಿಂಗ್ಸ್ 141.3 ಓವರ್‌ಗಳಲ್ಲಿ ಆಲೌಟ್ 414
        ಸಮರ್ತ ಸಿ ಪಂತ್ ಬಿ ಟೊಕಸ್53
    ಎಂ. ಅಗರವಾಲ್ ಸಿ ಚಂದ್ ಬಿ ಟೊಕಸ್ 56
    ಉತ್ತಪ್ಪ ಸಿ ಚಂದ್ ಬಿ ಸುಯಾಲ್ 05
    ಕರುಣ್ ನಾಯರ್ ಸಿ ಆ್ಯಂಡ್ ಬಿ ಸೋದ್ 53
    ಎ.ಮಿಥುನ್ ಸಿ ಪಂತ್ ಬಿ ಶರ್ಮ12
    ಎಂ.ಕೆ.ಅಬ್ಬಾಸ್ ಎಲ್‌ಬಿಡಬ್ಲು ಬಿ ಸೋದ್52
    ಎಸ್.ಬಿನ್ನಿ ಸಿ ಆ್ಯಂಡ್ ಬಿ ಟೊಕಸ್ 32
        ಸಿ.ಎಂ.ಗೌತಮ್ ಔಟಾಗದೆ63
    ಎಸ್.ಗೋಪಾಲ್ ಬಿ ಮನನ್ ಶರ್ಮ46
    ಕೆ.ಗೌತಮ್ ಬಿ ವರುಣ್ ಸೋದ್08
    ಎಸ್.ಅರವಿಂದ್ ಎಲ್‌ಬಿಡಬ್ಲು ಬಿ ಸೋದ್14
                ಇತರೆ20

ವಿಕೆಟ್ ಪತನ: 1-87, 2-114, 3-124, 4-136, 5-225, 6-258, 7-290, 8-367, 9-396, 10-414.
ಬೌಲಿಂಗ್ ವಿವರ
        ಇಶಾಂತ್ ಶರ್ಮ 21.0-5-063-1
        ಪವನ್ ಸುಯಾಲ್ 23.0-6-071-1
        ಮನನ್ ಶರ್ಮ38.0-6-102-1
        ವಿ.ಟೊಕಸ್29.0-6-081-3
        ವರುಣ್ ಸೋದ್30.3-4-080-4
,,,,,,,,,,,,

ಎರಡನೆ ದಿನದಾಟದಂತ್ಯಕ್ಕೆ ವಿವಿಧ ತಂಡಗಳ ಸ್ಕೋರ್
ಗ್ರೂಪ್-ಎ’
*ಮಧ್ಯ ಪ್ರದೇಶ 445-ಮುಂಬೈ 38/2
*ಬಂಗಾಳ 404-ಪಂಜಾಬ್ 168/4
*ಗುಜರಾತ್187, 295/3-ರೈಲ್ವೇಸ್ 124
*ಉತ್ತರ ಪ್ರದೇಶ 524-ತಮಿಳುನಾಡು 32/1
ಗ್ರೂಪ್ -ಬಿ
*ಸೌರಾಷ್ಟ್ರ 657-8(ಡಿಕ್ಲೇರ್)-ಮಹಾರಾಷ್ಟ್ರ 18/0
*ದಿಲ್ಲಿ 90-ಕರ್ನಾಟಕ 414
*ವಿದರ್ಭ 254/3-ಅಸ್ಸಾಂ
*ಜಾರ್ಖಂಡ್ 209, 73/2-ರಾಜಸ್ಥಾನ 207
ಗ್ರೂಪ್ -ಸಿ
*ತ್ರಿಪುರಾ 549- ಹಿಮಾಚಲ ಪ್ರದೇಶ 50/1
*ಕೇರಳ 506/9- ಹೈದರಾಬಾದ್
*ಹರ್ಯಾಣ 178, 121/3-ಛತ್ತಿಸ್‌ಗಡ 189
*ಗೋವಾ 606/6(ಡಿಕ್ಲೇರ್)-ಸರ್ವಿಸಸ್ 39/1
*ಜಮ್ಮು ಮತ್ತು ಕಾಶ್ಮೀರ 334-ಆಂಧ್ರ 72/2

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News