ಕಾಲು ಇಡಬೇಕಾದಲ್ಲಿ ಇಡದೆ ಎಡವಟ್ಟು ಮಾಡಿಕೊಂಡ ಫುಟ್ಬಾಲ್ ತಾರೆ ರೊನಾಲ್ಡೊ

Update: 2016-10-23 03:18 GMT

ಹೊಸದಿಲ್ಲಿ, ಅ.23: ರಿಯಲ್ ಮ್ಯಾಡ್ರಿಡ್‌ನ ಸೂಪರ್‌ಸ್ಟಾರ್, ಫುಟ್ಬಾಲ್ ತಾರೆ ಕ್ರಿಸ್ಟಿನೊ ರೊನಾಲ್ಡೊ ತಮ್ಮ ಮಾಂತ್ರಿಕ ಕಾಲಿಗಾಗಿ ಸದಾ ಸುದ್ದಿಯಲ್ಲಿರುವವರು. ಆದರೆ ಇದೀಗ ವಿಭಿನ್ನ ಕಾರಣಕ್ಕೆ ರೊನಾಲ್ಡೊ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಬುದ್ಧನ ಪ್ರತಿಮೆಯ ಅಡಿಗಟ್ಟಿನ ಮೇಲೆ ಕಾಲಿಟ್ಟು ನಿಂತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಕಾರಣಕ್ಕೆ ಇದೀಗ ಪೋರ್ಚುಗಲ್ ನಾಯಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಚಿತ್ರವನ್ನು ರೊನಾಲ್ಡೊ ಗುರುವಾರ ಪೋಸ್ಟ್ ಮಾಡಿದ್ದು, "ಬೋಮ್ ದಿಯಾ (ಸುದಿನ) ಎಂದಷ್ಟೇ ಪೋಸ್ಟ್ ಮಾಡುವ ವೇಳೆ ರೊನಾಲ್ಡೊ ಶೀರ್ಷಿಕೆ ಹಾಕಿದ್ದರು. ಈ ಚಿತ್ರಕ್ಕೆ ಲಕ್ಷಾಂತರ ಲೈಕ್‌ಗಳು ಬಂದಿದ್ದರೂ, ಕೆಲವರು ಇದಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ, 73,500 ಮಂದಿ ಫೇಸ್‌ಬುಕ್‌ನಲ್ಲಿ "ಕೋಪ" ವ್ಯಕ್ತಪಡಿಸಿದ್ದಾರೆ. ಇದಕ್ಕೆ ಫೇಸ್‌ಬುಕ್ ಬಳಕೆದಾರರು "ನಾಟ್ ಗುಡ್" ಎಂದು ತಿರುಗೇಟು ನೀಡಿದ್ದಾರೆ.

"ಧರ್ಮದ ಬಗ್ಗೆ ಗೌರವ ಇರಲಿ" ಎಂದು ಮತ್ತೊಬ್ಬರು ಸಲಹೆ ಮಾಡುವ ಮೂಲಕ ಸಿಟ್ಟು ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್‌ನಲ್ಲೂ ಫುಟ್ಬಾಲ್ ಮಾಂತ್ರಿಕನ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, "ಒಂದು ಸೆಕೆಂಡ್‌ನಲ್ಲೇ ಹೇಗೆ ಸಾವಿರಾರು ಅಭಿಮಾನಿಗಳನ್ನು ಕಳೆದುಕೊಳ್ಳಬೇಕು..ಸಾಂಸ್ಕೃತಿಕ ಅಸಡ್ಡೆ" ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News