ಕತರ್ ಮಾಜಿ ಅಮೀರ್ ಶೇಖ್ ಖಲೀಫ ಬಿನ್ ಹಮದ್ ಅಲ್‌ತಾನಿ ನಿಧನ

Update: 2016-10-24 06:02 GMT

ದೋಹ, ಅಕ್ಟೋಬರ್ 24: ಕತರ್‌ನ ಅಮೀರ್ ಶೇಖ್ ತಮೀಂ ಬಿನ್ ಹಮದ್ ಅಲ್‌ತಾನಿಯವರ ತಂದೆ ಮಾಜಿ ಅಮೀರ್ ಶೇಖ್ ಖಲೀಫ ಬಿನ್ ಹಮದ್ ಅಲ್‌ತಾನಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ನಿನ್ನೆರಾತ್ರೆ ಹತ್ತು ಗಂಟೆಗೆ ಅವರ ನಿಧನ ಸುದ್ದಿಯನ್ನು ದೀವಾನೆ ಅಮೀರಿ ಅಧಿಕೃತವಾಗಿ ಪ್ರಕಟಿಸಿದೆ. 1972 ಫೆಬ್ರವರಿ 22ಕ್ಕೆ ಕತರ್ ಅಮೀರ್ ಆಗಿ ಅವರು ಅಧಿಕಾರ ವಹಿಸಿಕೊಂಡಿದ್ದರು. 1995 ಜೂನ್ 27ಕ್ಕೆ ಪುತ್ರ ಶೇಖ್ ಹಮದ್ ಬಿನ್ ಖಲೀಫ ಅಲ್‌ತಾನಿ ಅಧಿಕಾರ ವಹಿಸಿಕೊಳ್ಳುವವರೆಗೆ 23ವರ್ಷಗಳ ಕಾಲ ಅವರು ಕತರ್‌ನ ಅಮೀರ್ ಆಗಿ ಕಾರ್ಯನಿರ್ವಹಿಸಿದ್ದರು. ಕತರ್‌ನ ಪ್ರಗತಿಯಲ್ಲಿ ಅವರು ಪ್ರಧಾನ ಪಾತ್ರವಹಿಸಿದ್ದಾರೆ ಎಂದು ವರದಿ ತಿಳಿಸಿದೆ.

1932ರಲ್ಲಿ ರಯ್ಯನ್‌ನಲ್ಲಿ ಅವರು ಜನಿಸಿದ್ದರು. 1957ರಲ್ಲಿ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ನಂತರ ಉಪಅಮೀರ್ ಆಗಿ ನೇಮಕವಾದರು. 1972ರಲ್ಲಿ ಅಂದಿನ ಅಮೀರ್ ಅಮದ್ ಬಿನ್ ಅಲಿ ಅಲ್‌ತಾನಿಯವರಿಂದ ಅಧಿಕಾರವನ್ನು ವಹಿಸಿಕೊಂಡು ಅಮೀರ್ ಆಗಿ ನೇಮಕಗೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News