ಟೈಟಾನಿಕ್ ಹಡಗಿನ ಲಾಕರ್ ಬೀಗದ ಕೈ 69 ಲಕ್ಷರೂ.ಗೆ ಏಲಂ !

Update: 2016-10-24 09:44 GMT

ಲಂಡನ್, ಅಕ್ಟೋಬರ್ 24: 1912ರಲ್ಲಿ ಇಂಗ್ಲೆಂಡ್‌ನಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ವೇಳೆ ಮುಳುಗಿದ ಇಂಗ್ಲಿಷ್ ಅದ್ದೂರಿ ಹಡಗು ಟೈಟಾನಿಕ್‌ನ ಒಂದು ಲಾಕರ್‌ನ ಬೀಗದಕೈ 69 ಲಕ್ಷರೂಪಾಯಿಗೆ ಹರಾಜಾಗಿದೆ ಎಂದು ವರದಿಯಾಗಿದೆ.

ಇಂಗ್ಲೆಂಡ್‌ನ ಪ್ರಮುಖ ಹರಾಜುದಾರ ಹೆಂಟಿ ಅಲ್ಡ್ರಿಡ್ಚ್ ಆ್ಯಂಡ್ ಸನ್ ನಡೆಸಿ ಕೊಟ್ಟ ಏಲಂನಲ್ಲಿ ತುಕ್ಕು ಹಿಡಿದಿದ್ದ ಈ ಬೀಗದ ಕೈ ನಿರೀಕ್ಷೆ ಗಿಂತ ಹೆಚ್ಚು ಮೊತ್ತಕ್ಕೆ ಹರಾಜಾಗಿದೆ. ಹಡಗಿನ ಮೇಲ್ನೋಟ ವಹಿಸಿದ್ದ ಸಿಡ್ನಿ ಸೆಂಡುನಾರಿ ಎಂಬ 23 ವರ್ಷದ ವ್ಯಕ್ತಿಗೆ ಈ ಕೀಲಿಕೈ ಸೇರಿದೆ. ಲಾಕರ್ 14ಎಫ್ ಡೆಕ್ ಎಂದು ಬರೆದಿದ್ದ ಹಿತ್ತಾಳೆಯ ಕೀಲಿಕೈ ಇದಾಗಿದ್ದು, ಟೈಟಾನಿಕ್ ವಸ್ತುಗಳಿಗೆ ಪ್ರಾಚ್ಯವಸ್ತು ಮಾರುಕಟ್ಟೆಯಲ್ಲಿ ಭಾರೀಬೇಡಿಕೆ ಇದೆ.

ಹಡಗು ಮುಳುಗುತ್ತಿದ್ದಾಗ ಪ್ರಯಾಣಿಕರೊಬ್ಬರು ನುಡಿಸುತ್ತಿದ್ದ ವಯೋಲಿನ್ 2013ರರಲ್ಲಿ ಎಂಟು ಕೋಟಿ ರೂಪಾಯಿಗೆ (1 ಮಿಲಿಯನ್ ಪೌಂಡ್) ಹರಾಜಾಗಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News