ನಾನು ಅಧ್ಯಕ್ಷನಾಗಿಯಾದರೂ ದಾಖಲಾಗುತ್ತೇನೆ: ಒಬಾಮ

Update: 2016-10-25 18:42 GMT

 ಲಾಸ್ ಏಂಜಲಿಸ್, ಅ. 25: ಟ್ವಿಟರ್‌ನಲ್ಲಿ ನಿರಂತರವಾಗಿ ತನ್ನ ಎದುರಾಳಿಗಳನ್ನು ಬೈಯುತ್ತಾ, ಅವಮಾನಪಡಿಸುವ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಸೋಮವಾರ ತಿರುಗೇಟು ನೀಡಿದರು. ಎಬಿಸಿ ಟೆಲಿವಿಶನ್‌ನ ತಡ ರಾತ್ರಿಯ ಕಾರ್ಯಕ್ರಮ ‘ಜಿಮ್ಮಿ ಕಿಮೆಲ್ ಲೈವ್’ನಲ್ಲಿ ಭಾಗವಹಿಸಿದ ಅವರು ಟ್ರಂಪ್‌ರ ಹಲವಾರು ದ್ವೇಷಕಾರುವ ಟ್ವೀಟ್‌ಗಳನ್ನು ಓದಿದರು. ‘‘ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಅಧ್ಯಕ್ಷರಾಗಿ ಒಬಾಮ ದಾಖಲಾಗಲಿದ್ದಾರೆ’’ ಎಂಬ ಟ್ರಂಪ್‌ರ ಟ್ವೀಟನ್ನು ಒಬಾಮ ಓದಿದರು.

 ‘‘ನಾನು ಕನಿಷ್ಠ ಅಧ್ಯಕ್ಷನಾಗಿಯಾದರೂ ದಾಖಲಾಗಲಿದ್ದೇನೆ’’ ಎಂದು ಅದಕ್ಕೆ ಅವರು ಪ್ರತಿಕ್ರಿಯಿಸಿದರು. ಒಂದು ಹಂತದಲ್ಲಿ ಕಾರ್ಯಕ್ರಮ ನಿರ್ವಾಹಕ ಕಿಮೆಲ್ ಒಬಾಮರನ್ನು ಕೇಳಿದರು: ‘‘ಟ್ರಂಪ್‌ರನ್ನು ಟಿವಿಯಲ್ಲಿ ನೋಡುವಾಗ ನೀವು ಯಾವಾಗಾದರೂ ನಕ್ಕಿದ್ದಿದೆಯೇ?’’ ‘‘ಹೆಚ್ಚಿನ ಸಂದರ್ಭಗಳಲ್ಲಿ ನಗುತ್ತೇನೆ’’ ಎಂದು ಒಬಾಮ ಉತ್ತರಿಸಿದರು. ಈ ಸಂದರ್ಭದಲ್ಲಿ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ವ್ಯಂಗ್ಯಭರಿತ ಮಾತುಗಳ ಪ್ರವಾಹವನ್ನೇ ಹರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News