ನಾಲ್ಕನೆ ಏಕದಿನ: ಧೋನಿ ಮ್ಯಾಜಿಕ್ ರನೌಟ್

Update: 2016-10-27 18:12 GMT

ರಾಂಚಿ, ಅ.27: ನ್ಯೂಝಿಲೆಂಡ್ ವಿರುದ್ಧ ಬುಧವಾರ ರಾತ್ರಿ ತನ್ನ ತವರು ಪಟ್ಟಣದಲ್ಲಿ ನಡೆದ ನಾಲ್ಕನೆ ಏಕದಿನ ಪಂದ್ಯದಲ್ಲಿ ನಾಯಕ ಎಂಎಸ್ ಧೋನಿ ಬ್ಯಾಟಿಂಗ್‌ನಲ್ಲಿ ಮಿಂಚದಿದ್ದರೂ ‘ಮ್ಯಾಜಿಕ್ ರನೌಟ್’ನಿಂದ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದ್ದರು.

    ಕಿವೀಸ್‌ನ ಸ್ಟಾರ್ ಬ್ಯಾಟ್ಸ್‌ಮನ್ ರಾಸ್ ಟೇಲರ್ 35 ರನ್ ಗಳಿಸಿದ್ದಾಗ 45.3ನೆ ಓವರ್‌ನಲ್ಲಿ ಧೋನಿ ರನೌಟ್ ಮಾಡಿದ್ದರು.

ಟೇಲರ್ ಅವರು ಉಮೇಶ್ ಯಾದವ್ ಎಸೆತದಲ್ಲಿ 1 ರನ್ ಗಳಿಸಿ ಎರಡನೆ ರನ್ ಗಳಿಸುವ ಹಾದಿಯಲ್ಲಿದ್ದಾಗ ವಿಕೆಟ್‌ಕೀಪರ್ ಧೋನಿ ಮುಂದಕ್ಕೆ ಹೋಗಿ ಬೌಲರ್ ಧವಳ್ ಕುಲಕರ್ಣಿಯಿಂದ ಚೆಂಡನ್ನು ಪಡೆದರು. ಬಳಿಕ ತನ್ನ ಬೆನ್ನ ಹಿಂದಿನಿಂದ ಸ್ಟಂಪ್‌ಗೆ ಗುರಿ ಇಟ್ಟರು. ಅವರ ಗುರಿ ತಪ್ಪಲಿಲ್ಲ. ಚೆಂಡು ಸ್ಟಂಪ್‌ಗೆ ಅಪ್ಪಳಿಸಿ ರಾಸ್ ಟೇಲರ್ ಪೆವಿಲಿಯನ್ ಸೇರಿದರು.

ಈ ಮೂಲಕ ಧೋನಿ ಮತ್ತೊಮ್ಮೆ ಮ್ಯಾಜಿಕ್ ರನೌಟ್‌ನಿಂದ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News