ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬೌಲರ್‌ಗಳ ಅಬ್ಬರ: 147ಕ್ಕೆ ಗುಜರಾತ್ ಸರ್ವಪತನ
Update: 2024-05-04 21:31 IST
PC : X \ @IPL
ಬೆಂಗಳೂರು: ಗುಜರಾತ್ ಟೈಟಾನ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿದ್ದಾರೆ. ಗುಜರಾತ್ ತಂಡ 19.3 ಓವರ್‌ಗಳಲ್ಲಿ ಕೇವಲ 147 ರನ್‌ಗೆ ಆಲೌಟಾಗಿದ್ದು, ಆರ್‌ಸಿಬಿ ಗೆಲುವಿಗೆ 148ರ ಗುರಿ ನೀಡಿದೆ. ಮೊಹಮದ್ ಸಿರಾಜ್, ಯಶ್ ದಯಾಳ್ ಹಾಗೂ ವಿಜಯ್‌ಕುಮಾರ್ ವೈಶಾಖ್ ತಲಾ 2 ವಿಕೆಟ್ ಪಡೆದರು.