ಸೋಲಾರ್ ಪ್ರಕರಣ: ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅರ್ಜಿ ಇಂದು ಪರಿಗಣನೆಗೆ

Update: 2016-11-03 07:05 GMT

ಬೆಂಗಳೂರು, ನ. 3: ಸೌರಫಲಕ ಹಗರಣದಲ್ಲಿ ತನ್ನ ವಿರುದ್ಧ ಬಂದಿರುವತೀರ್ಪಿಗೆ ಸ್ಟೇ ನೀಡಬೇಕೆಂದು ಆಗ್ರಹಿಸಿ ಕೇರಳದಮಾಜಿ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಸಲ್ಲಿಸಿದ ಅರ್ಜಿ ಇಂದು ಪರಿಗಣನೆಗೆ ಬರಲಿದೆ ಎಂದು ವರದಿಯಾಗಿದೆ. ಅವರು ತನ್ನ ವಿರುದ್ಧ ತೀರ್ಪಿಗೆ ತಡೆಯಾಜ್ಞೆ ನೀಡಬೇಕೆಂದು ಬೆಂಗಳೂರು ಸಿಟಿ ಸಿವಿಲ್ ಆ್ಯಂಡ್ ಸೆಶನ್ಸ್ ಕೋರ್ಟಿನಲ್ಲಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ತನ್ನ ವಾದವನ್ನು ಆಲಿಸದೆಯೇ ತೀರ್ಪು ಪ್ರಕಟಿಸಲಾಗಿದೆ ಎಂದು ನ್ಯಾಯವಾದಿ ಎ. ಸಂತೋಷ್ ಮೂಲಕ ಚಾಂಡಿ ಕೋರ್ಟಿಗೆ ಅರ್ಜಿಸಲ್ಲಿಸಿದ್ದಾರೆ. ಬೆಂಗಳೂರಿನ ಉದ್ಯಮಿ ಎಂಕೆ. ಕುರುವಿಳ ಎಂಬವರು ಸೌರಫಲಕ ಹಗರಣದ ಕುರಿತು ಕೋರ್ಟಿಗೆ ದೂರು ನೀಡಿದ್ದರು. ಅಕ್ಟೋಬರ್ 24ಕ್ಕೆ ಉಮ್ಮನ್ ಚಾಂಡಿ ಸಹಿತ ಆರು ಮಂದಿ ಆರೋಪಿಗಳ ತೀರ್ಪು ನೀಡಿ ಕುರುವಿಳಗೆ 1,60,85,700ರೂಪಾಯಿ ನೀಡಬೇಕೆಂದು ಆದೇಶ ಹೊರಡಿಸಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News