ನೇತ್ರದಾನ ಕಡ್ಡಾಯಗೊಳಿಸಿ...

Update: 2016-11-06 18:45 GMT

ಮಾನ್ಯರೆ,
ಭೂಮಿ ಮೇಲಿನ ಪ್ರತಿಯೊಬ್ಬ ಪ್ರಜೆಗೂ ಕಣ್ಣುಗಳು ಅತ್ಯಮೂಲ್ಯವಾದ ಸಂಪತ್ತು ಒಂದು ವೇಳೆ ಕಣ್ಣುಗಳು ಇಲ್ಲದೆ ಇದ್ದಲ್ಲಿ ಆ ವ್ಯಕ್ತಿ ಇದ್ದರೂ ಇಲ್ಲದಂತೆ. ಆದ್ದರಿಂದ ನಮ್ಮ ಕಣ್ಣುಗಳನ್ನು ಬಹಳ ಸುರಕ್ಷತೆಯಿಂದ ನೋಡಿಕೊಳ್ಳಬೇಕು.
ನಮ್ಮ ದೇಶದಲ್ಲಿ ಶೇ.4.5ರಷ್ಟು ಮಂದಿ ಹುಟ್ಟಿನಿಂದ ಅಂಧರಾಗಿರುವುದು ವಿಷಾದನೀಯ ಸಂಗತಿ. ಇದರಲ್ಲಿ ಶೇ.90 ರಷ್ಟು ಗ್ರಾಮೀಣ ಭಾಗದ ಯುವ ಜನಾಂಗ ದೃಷ್ಟಿಹೀನತೆಯಿಂದ ಬಳಲುತ್ತಿದ್ದಾರೆ.
 ಆದ್ದರಿಂದ ನಾವುಗಳು ಮರಣದ ನಂತರ ನಮ್ಮ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸುವುದಕ್ಕಿಂತ ಅಂಧರಿಗೆ ಕಣ್ಣುಗಳನ್ನು ದಾನ ಮಾಡುವ ಮೂಲಕ ನಮ್ಮ ಕಣ್ಣುಗಳು ಅಂಧರ ಬಾಳಿಗೆ ಬೆಳಕು ನೀಡಲಿ. ಇದರಿಂದ ಭಾರತ ದೇಶವನ್ನು ಅಂಧ ಮುಕ್ತ ದೇಶವನ್ನಾಗಿ ಮಾಡಲು ಕೂಡಾ ಸಾಧ್ಯವಾಗಬಲ್ಲದು.

ಈಗಾಗಲೇ ಯೂರೋಪ್,ಅಮೆರಿಕ, ಶ್ರೀಲಂಕಾ ಹಾಗೂ ಮತ್ತಿತರೆ ದೇಶಗಳಲ್ಲಿ ಸಾವಿನ ನಂತರ ತಮ್ಮ ಕಣ್ಣುಗಳನ್ನು ಕಡ್ಡಾಯವಾಗಿ ದಾನ ಮಾಡಬೇಕೆಂದು ಅಲ್ಲಿನ ಸರಕಾರಗಳು ಕಾನೂನು ಜಾರಿಗೆ ತಂದಿವೆ. ಅದರಂತೆ ನಮ್ಮ ಭಾರತದಲ್ಲೂ ಕೂಡಾ ಸಾವಿನ ನಂತರ ಕಣ್ಣುಗಳನ್ನು ಕಡ್ಡಾಯವಾಗಿ ದಾನ ಮಾಡುವಂತೆ ಕಾನೂನು ಜಾರಿಗೆ ತರಬೇಕು. ಜೊತೆಗೆ ನೇತ್ರದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸಮೂಹ ಮಾಧ್ಯಮಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ನಾಟಕ ಪ್ರದರ್ಶನಗಳನ್ನು ಮಾಡಬೇಕು. ಹಾಗೇನೆ ಮಕ್ಕಳಿಗೂ ನೇತ್ರದಾನದ ಮಹತ್ವದ ಕುರಿತು ಪಠ್ಯಪುಸ್ತಕಗಳಲ್ಲಿ ಮಾಹಿತಿ ನೀಡಬೇಕು.

Writer - -ಮೌಲಾಲಿ ಕೆ.ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ.ಬೋರಗಿ, ಸಿಂದಗಿ

contributor

Similar News