×
Ad

ಕನ್ನಡ ನಟ ಅನಿಲ್ ಮೃತದೇಹ ಪತ್ತೆ

Update: 2016-11-10 10:25 IST

   ಬೆಂಗಳೂರು, ನ.10: 'ಮಾಸ್ತಿಗುಡಿ' ಚಿತ್ರದ ಸಾಹಸ ದ್ಯಶ್ಯದ ವೇಳೆ ಹೆಲಿಪಾಕ್ಟರ್‌ನಿಂದ ತಿಪ್ಪಗೊಂಡನಹಳ್ಳಿಯ ಸರೋವರಕ್ಕೆ ಹಾರಿ ನಾಪತ್ತೆಯಾಗಿದ್ದ ಕನ್ನಡ ಚಿತ್ರನಟ ಅನಿಲ್ ಮೃತದೇಹ ಗುರುವಾರ ಬೆಳಗ್ಗಿನ ಜಾವ 5:30ಕ್ಕೆ ಪತ್ತೆಯಾಗಿದೆ.

ಮೂರು ದಿನಗಳ ಹಿಂದೆ ತಿಪ್ಪಗೊಂಡನಹಳ್ಳಿ ಸರೋವರದಲ್ಲಿ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಚಿತ್ರದ ಖಳ ನಟರಾದ ಅನಿಲ್ ಹಾಗೂ ಉದಯ್ ಹೆಲಿಕಾಪ್ಟರ್‌ನಿಂದ ಜಿಗಿಯುವ ದೃಶ್ಯವಿತ್ತು. ಈ ದೃಶ್ಯ ಶೂಟಿಂಗ್‌ಗೆ ಲೈಫ್ ಜಾಕೆಟ್ ಬಳಸದೇ ಪಾಲ್ಗೊಂಡಿದ್ದ ಅನಿಲ್ ಹಾಗೂ ಉದಯ್ 60 ಅಡಿ ಆಳದ ಸರೋವರದಲ್ಲಿ ಮುಳುಗಿದ್ದರು. ಈ ಇಬ್ಬರಿಗಾಗಿ ಕಳೆದ ಮೂರು ದಿನಗಳಿಂದ ಶೋಧಕಾರ್ಯ ನಡೆಸಲಾಗಿದೆ. ಉದಯ್ ಮೃತದೇಹ ಬುಧವಾರ ಮಧಾಹ್ನ ಸರೋವರದಲ್ಲಿ ತೇಲಿಬಂದಿತ್ತು.

ಅನಿಲ್ ಮೃತದೇಹ ಪತ್ತೆಯಾಗಿದ್ದು ಪೋಸ್ಟ್‌ಮಾರ್ಟಂ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.

ಉದಯ್ ಅಂತಿಮಯಾತ್ರೆ: ಉದಯೋನ್ಮುಖ ಖಳ ನಟ ಉದಯ್ ರಾಘವ್‌ರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ.

ಮೆರವಣಿಗೆಯ ಮೂಲಕ ಕೆಆರ್ ರಸ್ತೆ, ಬನಶಂಕರಿ ದೇಗುಲಮಾರ್ಗದಲ್ಲಿ ಉದಯ್ ಪಾರ್ಥಿವ ಶರೀರವನ್ನು ಲಾರಿಯಲ್ಲಿ ಇಟ್ಟು ಮೆರವಣಿಗೆ ನಡೆಸಲಾಗಿದ್ದು, ಬನಶಂಕರಿ ಸ್ಮಶಾನದಲ್ಲಿ ದಫನ ಮಾಡಲು ಸಿದ್ಧತೆ ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News