ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಜಯಂತ್

Update: 2016-11-18 18:03 GMT

ಹೊಸದಿಲ್ಲಿ, ನ.18: ಆಫ್-ಸ್ಪಿನ್ನರ್ ಜಯಂತ್ ಯಾದವ್ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದ ವಿಝಾಗ್ ಸ್ಟೇಡಿಯಂನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದಾರೆ. ತನಗೆ ಲಭಿಸಿದ ಅವಕಾಶವನ್ನು ಎರಡೂ ಕೈಯಿಂದ ಬಾಚಿಕೊಂಡ ಜಯಂತ್ ಬ್ಯಾಟಿಂಗ್, ಫೀಲ್ಡಿಂಗ್ ಹಾಗೂ ಬೌಲಿಂಗ್‌ನಲ್ಲಿ ಗಮನ ಸೆಳೆದರು.

9ನೆ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಜಯಂತ್, ಇಂಗ್ಲೆಂಡ್‌ನ ಸ್ಪಿನ್ನರ್ ಆದಿಲ್ ರಶೀದ್‌ಗೆ 35 ರನ್‌ಗೆ ವಿಕೆಟ್ ಒಪ್ಪಿಸುವ ಮೊದಲು 84 ಎಸೆತಗಳಲ್ಲಿ 3 ಬೌಂಡರಿಗಳನ್ನು ಬಾರಿಸಿದರು. ಆಲ್‌ರೌಂಡರ್ ಅಶ್ವಿನ್‌ರೊಂದಿಗೆ 8ನೆ ವಿಕೆಟ್‌ಗೆ 64 ರನ್ ಜೊತೆಯಾಟದಲ್ಲಿ ಭಾಗಿಯಾದರು.

ಚುರುಕಿನ ಫೀಲ್ಡಿಂಗ್‌ನ ಮೂಲಕ ಇಂಗ್ಲೆಂಡ್‌ನ ಯುವ ಆರಂಭಿಕ ದಾಂಡಿಗ ಹಸೀಬ್ ಹಮೀದ್(13)ರನ್ನು ರನೌಟ್ ಆಗಲು ಕಾರಣರಾಗಿದ್ದರು. ಕ್ಷಿಪ್ರವಾಗಿ ಚೆಂಡನ್ನು ಸಂಗ್ರಹಿಸಿದ ಜಯಂತ್ ವಿಕೆಟ್‌ಕೀಪರ್ ಸಹಾಗೆ ನೀಡಿ ಹಮೀದ್‌ರನ್ನು ರನೌಟ್ ಮಾಡಿದರು.

ಚೊಚ್ಚಲ ಟೆಸ್ಟ್‌ನಲ್ಲಿ ತಾನೆಸೆದ ಎರಡನೆ ಓವರ್‌ನಲ್ಲಿ ಇಂಗ್ಲೆಂಡ್‌ನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಮೊಯಿನ್ ಅಲಿ(1) ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಆರಂಭದಲ್ಲಿ ಅಂಪೈರ್ ನಾಟೌಟ್ ತೀರ್ಪು ನೀಡಿದ್ದರು. ಡಿಆರ್‌ಎಸ್‌ಗೆ ಮೊರೆ ಹೋದಾಗ ತೀರ್ಪು ಜಯಂತ್ ಪರವಾಗಿ ಬಂತು. ಜಯಂತ್‌ಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ವಿಕೆಟ್ ಲಭಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News