ರೂ.2000ದ ನೋಟಿನ ಭದ್ರತಾಂಶದ ಬಗ್ಗೆ ತಿಳಿದಿರಬೇಕಾದ 17 ಸಂಗತಿಗಳು

Update: 2016-11-22 15:09 GMT

1. ಬೆಳಕಿನ ಎದುರು ಹಿಡಿದಾಗ 2000 ಎಂಬ ಸಂಖ್ಯೆ ಕಾಣಿಸುತ್ತದೆ.

2. ಕಣ್ಣಿಗೆ 45 ಡಿಗ್ರಿ ಕೋನದಲ್ಲಿ ಹಿಡಿದಾಗ ನೋಟಿನ ಬೆನ್ನ ಮೇಲೆ 2000 ಸಂಖ್ಯೆಯ ಗುಪ್ತ ಬಿಂಬ ಕಾಣಿಸುತ್ತದೆ.

3. 2000 ಎಂದು ದೇವನಾಗರಿಯಲ್ಲಿ ಬರೆಯಲಾಗಿದೆ.

4. ನಡುವೆ ಮಹಾತ್ಮಾ ಗಾಂಧಿಯವರ ಚಿತ್ರವಿದೆ.

5. ಆರ್‌ಬಿಐ ಹಾಗೂ 2000 ಎಂಬ ಸೂಕ್ಷ್ಮ ಅಕ್ಷರಗಳಿವೆ.

6. ಭದ್ರತಾ ದಾರದ ಮೇಲೆ ದೇವನಾಗರಿಯಲ್ಲಿ ಆರ್‌ಬಿಐ ಹಾಗೂ ಭಾರತ್ ಮತ್ತು 2000 ಎಂಬ ಸಂಖ್ಯೆಯಿದೆ. ಭದ್ರತಾದಾರದ ಬಣ್ಣ ಹಸಿರಿನಿಂದ ನೀಲಿಗೆ ತಿರುಗುತ್ತದೆ.

7. ಬಲಗಡೆಯಲ್ಲಿ ಖಾತರಿ ಹೇಳಿಕೆ, ಆರ್‌ಬಿಐ ಗವರ್ನರರ ಸಹಿ ಹಾಗೂ ಬಲಗಡೆಯಲ್ಲಿ ಭರವಸೆ ಹೇಳಿಕೆ ಹಾಗೂ ಆರ್‌ಬಿಐಯ ಲಾಂಛನವಿದೆ.

8. ಮಹಾತ್ಮಾಗಾಂಧಿ ಚಿತ್ರದ ಜಲಚಿಹ್ನೆ ಹಾಗೂ ಇಲೆಕ್ಟ್ರೊಟೈಪ್ 2000 ಜಲಚಿಹ್ನೆಯಿದೆ.

9. ಸಂಖ್ಯಾ ಫಲಕದಲ್ಲಿ ಎಡಬದಿ ಮೇಲ್ಗಡೆಯಲ್ಲಿ ಹಾಗೂ ಕೆಳಗಡೆ ಬಲಬದಿಯಲ್ಲಿ ಅಂಕೆಗಳು ಚಿಕ್ಕದರಿಂದ ದೊಡ್ಡದಾಗಿ ಬೆಳೆಯುತ್ತವೆ.

10. ಕೆಳಗಡೆ ಬಲಬದಿಯಲ್ಲಿ ರೂಪಾಯಿ ಚಿಹ್ನೆಯೊಂದಿಗೆ ಮುದ್ರಿಸಿರುವ ವೌಲ್ಯ ಬಣ್ಣ ಬದಲಿಸುತ್ತದೆ.

11. ಬಲಬದಿಯಲ್ಲಿ ಅಶೋಕ ಸ್ತಂಭ ಲಾಂಛನ. ದೃಷ್ಟಿದೋಷವಿರುವವರಿಗಾಗಿ ಉಬ್ಬಿದ ಗಾಂಧಿ ಚಿತ್ರ, ಅಶೋಕ ಸ್ತಂಭ, ಕೆಂಪುರೇಖೆಗಳು ಹಾಗೂ ಗುರುತು ಚಿಹ್ನೆಗಳಿವೆ.

12. ಬಲಬದಿಯಲ್ಲಿ ಉಬ್ಬಿದ 2000 ಅಂಕೆಯೊಂದಿಗೆ ಸಮತಲ ಆಯತವಿದೆ.

13. ಎಡ ಹಾಗೂ ಬಲ ಬದಿಗಳಲ್ಲಿ 7 ಉಬ್ಬಿದ ಕೋನೀಯ ಕೆಂಪು ರೇಖೆಗಳಿವೆ.

14. ನೋಟು ಮುದ್ರಣದ ವರ್ಷವಿದೆ.

15. ಘೋಷ ವಾಕ್ಯದೊಂದಿಗೆ ಸ್ವಚ್ಛಭಾರತ ಲಾಂಛನವಿದೆ.

16. ಮಧ್ಯದಲ್ಲಿ ಭಾಷಾ ಘಟಕವಿದೆ.

17. ಮಂಗಳಯಾನದ ಚಿತ್ರವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News