ದುಬೈ ಪೊಲೀಸ್ ಮುಖ್ಯಸ್ಥ ನಿಧನ

Update: 2016-11-25 06:24 GMT

ದುಬೈ,ನ. 25: ದುಬೈ ಪೊಲೀಸ್ ಮುಖ್ಯಸ್ಥರಾದ ಲೆಪ್ಟಿನೆಂಟ್ ಜನರಲ್ ಖಮೀಸ್ ಮತಾರ್ ಅಲ್ ಮಸೀನ ನಿಧನರಾಗಿದ್ದಾರೆಂದು ವರದಿಯಾಗಿದೆ. ಗುರುವಾರ ತಡ ರಾತ್ರಿ ರಾಶಿದ್ ಆಸ್ಪತ್ರೆಯಲ್ಲಿ ಅವರು ನಿಧನರಾದರು. ಲೆಪ್ಟಿನೆಂಟ್ ಜನರಲ್ ಮಸೀನ 2013ರಲ್ಲಿ ದುಬೈ ಪೊಲೀಸ್ ಮುಖ್ಯಸ್ಥರ ಸ್ಥಾನಕ್ಕೆ ನೇಮಕಗೊಂಡಿದ್ದರು.

1983 ಜೂನ್‌ನಲ್ಲಿ ಇವರು ದುಬೈ ಪೊಲೀಸ್ ಸೇನೆಗೆ ಭರ್ತಿಯಾಗಿದ್ದರು. ಮೂವತ್ತಮೂರು ವರ್ಷದ ಉತ್ಕೃಷ್ಟ ಸೇವೆ ಸಲ್ಲಿಸಿದ ಲೆಫ್ಟಿನೆಂಟ್ ಜನರಲ್ ಮಸೀನ ಅನೇಕ ಜಟಿಲ ಪ್ರಕರಣಗಳ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದರು. ಶುಕ್ರವಾರ ಜುಮ್ಮಾ ನಮಾಝ್ ಬಳಿಕ ಅಲ್‌ಕುಲ್ ಖಬರ್ ಸ್ಥಾನದಲ್ಲಿ ಅವರ ಪಾರ್ಥಿವ ಶರೀರದ ದಫನ ಕಾರ್ಯ ನಡೆಯಲಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News