ಕೆಸಿಎಫ್ ಜಿದ್ದಾ: ನೂತನ ಸಾಬಿಯ ಯೂನಿಟ್ ಅಸ್ತಿತ್ವಕ್ಕೆ

Update: 2016-12-06 05:03 GMT

ಜಿದ್ದಾ, ಡಿ.6: ಅನಿವಾಸಿ ಸುನ್ನಿ ಕನ್ನಡಿಗರ ಧಾರ್ಮಿಕ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ರಂಗದಲ್ಲಿ ಮುಂಚೂಣಿಯಲ್ಲಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ನೂತನ ಘಟಕವಾದ ಯೂನಿಟ್ ಸಮಿತಿಗಳು ಅಸ್ತಿತ್ವಕ್ಕೆ ಬರುತ್ತಿದ್ದು, ಅದರಂತೆ ಜಿದ್ದಾ ರೆನ್ ವ್ಯಾಪ್ತಿಯ ಬೇಶ್ ಸೆಕ್ಟರ್ ಅಧೀನದಲ್ಲಿ ಪ್ರಥಮ ಯೂನಿಟ್‌ಗೆ ಚಾಲನೆ ನೀಡಲಾಯಿತು.

ಕೆಸಿಎಫ್ ಜಿದ್ದಾ ಝೋನ್ ವ್ಯಾಪ್ತಿಯ ದ್ವಿತೀಯ ಯೂನಿಟ್ ಆಗಿ ಸಾಬಿಯ ಯೂನಿಟ್ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಅಬ್ದುಲ್ಲ ಮುಸ್ಲಿಯಾರ್ ಬಾಳೆಪುಣಿ, ಪ್ರಧಾನ ಕಾರ್ಯದರ್ಶಿ ಯಾಗಿ ಶರೀಫ್ ಬಾಳೆಪುಣಿ, ಕೋಶಾಧಿಕಾರಿಯಾಗಿ ರಿಯಾಝ್ ಉಪ್ಪಳ ಆಯ್ಕೆಯಾಗಿದ್ದಾರೆ.

*ಸಂಘಟನಾ ವಿಭಾಗ: ಅಧ್ಯಕ್ಷರಾಗಿ ಕಬೀರ್ ಝುಹ್ರಿ ಬಾಳೆಪುಣಿ, ಕನ್ವೀನರ್‌ರಾಗಿಇಮ್ತಿಯಾಝ್. *ಶಿಕ್ಷಣ ವಿಭಾಗ: ಅಧ್ಯಕ್ಷರಾಗಿ ಉಮರ್ ಝುಹ್ರಿ, ಕನ್ವೀನರ್‌ರಾಗಿ ಹಸನ್ ಪಾತೂರು.

*ಸಾಂತ್ವನ ವಿಭಾಗ: ಅಧ್ಯಕ್ಷರಾಗಿ ಅಬ್ದುಲ್ಲತೀಫ್ ಪುರುಸಂಗೋಡಿ, ಕನ್ವೀನರ್‌ರಾಗಿ ಇಬ್ರಾಹೀಂ ತೌಡುಗೋಳಿ.

*ಸಾರ್ವಜನಿಕ ಸಂಪರ್ಕ ವಿಭಾಗ: ಅಧ್ಯಕ್ಷರಾಗಿ ಸತ್ತಾರ್ ಬಾಳೆಪುಣಿ, ಕನ್ವೀನರ್‌ರಾಗಿ ಬದ್ರುದ್ದೀನ್ ತಂಙಳ್ ಉಳ್ಳಾಲ್ ಆಯ್ಕೆಯಾದರು. ಒಟ್ಟು 20 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಈ ಸಂದರ್ಭದಲ್ಲಿ ಕೆಸಿಎಫ್ ಬೇಶ್ ಸೆಕ್ಟರ್ ಅಧ್ಯಕ್ಷ ಅಬ್ಬಾಸ್ ಝುಹ್ರಿ, ಕೆಸಿಎಫ್ ಕುರಿತು ಸಾಂದರ್ಭಿಕವಾಗಿ ಮಾತನಾಡಿದರು. ಕೆಸಿಎಫ್ ಬೇಶ್ ಸೆಕ್ಟರ್ ಕೋಶಾಧಿಕಾರಿ ಅಬೂಬಕರ್ ಹಾಜಿ ಗೇರುಕಟ್ಟೆ ನೂತನ ಪದಾಧಿಕಾರಿಗಳಿಗೆ ಸಾಂಘಿಕ ಆವಶ್ಯಕತೆಯ ಕುರಿತು ವಿವರಿಸಿದರು. ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿಯ ಸದಸ್ಯ ಯಹ್ಯಾ ಕರುವೇಲ್ ಕೆಸಿಎಫ್‌ನ ಸಂಘಟನಾ ರಚನೆ ಯ ಕುರಿತು ವಿಷಯ ಮಂಡನೆಗೈದರು.

ಕೆಸಿಎಫ್ ಬೇಶ್ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಮುಕ್ಕ, ಬೇಶ್ ಸೆಕ್ಟರ್ ನಾಯಕರಾದ ಸಫ್ವಾನ್ ಸಾಕೋ, ಝಹೀರ್ ಪಡುಬಿದ್ರೆ, ಇಸ್ಮಾಯೀಲ್ ದೇರಳಕಟ್ಟೆ, ಸಿರಾಜ್ ತೆಕ್ಕಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News