ಭ್ರಷ್ಟ ಅಧಿಕಾರಿಗಳನ್ನು ಸುಟ್ಟು ಹಾಕಬೇಕು: ಸಚಿವ ರಮೇಶ್ ಕುಮಾರ್
Update: 2016-12-08 14:59 IST
ಬೆಂಗಳೂರು, ಡಿ.8: ಕೆ.ಎ.ಎಸ್ ಅಧಿಕಾರಿ ಭೀಮ ನಾಯಕ್ ಕಾರು ಚಾಲಕ ರಮೇಶ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ರಮೇಶ್ ಕುಮಾರ್ ಇಂತಹ ಭ್ರಷ್ಟ ಅಧಿಕಾರಿಗಳನ್ನ ಸುಟ್ಟು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಭ್ರಷ್ಟ ಅಧಿಕಾರಿಗಳಿಗೆ ಕೇವಲ ಶಿಕ್ಷೆ ವಿಧಿಸಿದರೆ ಸಾಲದು. ತಪ್ಪು ಯಾರು ಮಾಡಿದರೂ ತಪ್ಪೇ. ನಾನು ಮಾಡಿದರೂ ತಪ್ಪೇ ಸಿಎಂ ಮಾಡಿದರೂ ತಪ್ಪು ಎಂದು ಹೇಳಿದರು.
ಇತ್ತೀಚೆಗೆ ಚಿಕ್ಕರಾಯಪ್ಪ ಹಾಗೂ ಜಯಚಂದ್ರ ಮನೆ ಮೇಲೆ ಐಟಿ ದಾಳಿಯನ್ನು ಉಲ್ಲೇಖಿಸಿ ಮಾತನಾಡಿದ ರಮೇಶ್ ಕುಮಾರ್, ಪ್ರಧಾನಿ ನೋಟ್ ಬ್ಯಾನ್ ಮಾಡಿ ಇನ್ನೂ ತಿಂಗಳಾಗಿಲ್ಲ ಆದರೂ ನೋಟುಗಳ ಕಂತೆ ಕಂತೆ ತುಂಬಿಡುತ್ತಾರೆ ಅಂದ್ರೆ ನಾಚಿಕೆಯಾಗಬೇಕು. ಇವುಗಳ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದರು. ಈ ವ್ಯವಸ್ಥೆ ಕುಲಗೆಟ್ಟು ಹೋಗಿದ್ಹಾದು ಹಾಗಂತ ಹತಾಷರಾಗಬೇಕಿಲ್ಲ. ಆದರೆ ಭ್ರಷ್ಟರನ್ನು ಬಲಿ ಹಾಕಿ ವ್ಯವಸ್ಥೆಯನ್ನ ಸರಿಪಡಿಸಬೇಕೆಂದರು.