ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲಿರುವ ಫೇಸ್ ಬುಕ್

Update: 2016-12-16 06:47 GMT

ನ್ಯೂಯಾರ್ಕ್, ಡಿ.16: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಮೂಲಕಸುಳ್ಳು ವರದಿಗಳು ಹರಡುವುದನ್ನು ತಡೆಗಟ್ಟಲು ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದೆ. ತಪ್ಪಿತಸ್ಥರನ್ನು ಕಂಡು ಹಿಡಿಯಲು, ವಾಸ್ತವಾಂಶಗಳನ್ನು ಪರಿಶೀಲಿಸಲುಹಾಗೂ ಜನರ ಆಸಕ್ತಿಗಳಿಗೆ ತಕ್ಕಂತೆ ಸುಳ್ಳು ಸುದ್ದಿಗಳನ್ನು ರಚಿಸಿ ಹರಡುವವರನ್ನುಪತ್ತೆ ಹಚ್ಚಲು ಫೇಸ್ ಬುಕ್ ಕೆಲವರೊಂದಿಗೆ ಸಹಭಾಗಿತ್ವ ಹೊಂದಲಿದೆ.

ಯಾವುದೇ ಪುರಾವೆಯಿಲ್ಲದ ಕ್ಯಾನ್ಸರ್ ಕಾಯಿಲೆಗೆಮದ್ದುಗಳ ಬಗ್ಗೆ ಸುದ್ದಿಗಳು ಹಾಗೂಸೆಲೆಬ್ರಿಟಿಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಫೇಸ್ ಬುಕ್ ಮಾಡಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ಸುಳ್ಳು ರಾಜಕೀಯ ಕಥೆಗಳು ಜನರ ಅಭಿಪ್ರಾಯಗಳನ್ನು ಬದಲಿಸಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಭಾವ ಬೀರಿರಬಹುದೆಂಬ ವರದಿಗಳ ಬಗ್ಗೆಯೂ ಇಲ್ಲಿ ಉಲ್ಲೇಖಿಸಬಹುದಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧ ಸಮರ ಸಾರುವುದು ನಮ್ಮ ಬಾಧ್ಯತೆಯಾದರೂ ಜನರಿಗೆ ತಮ್ಮ ಅನಿಸಿಕೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ವೇದಿಕೆಯೊದಗಿಸುತ್ತಿರುವ ಫೇಸ್ ಬುಕ್ ಸಂಸ್ಥೆ ಯಾವುದು ನಿಜ ಅಥವಾ ಸುಳ್ಳು ಸುದ್ದಿ ಎಂದು ನಿರ್ಧರಿಸುವ ತಾಣವಲ್ಲ ಎಂದು ನ್ಯೂಸ್ ಫೀಡ್‌ ವಿಭಾಗದ ಉಪಾಧ್ಯಕ್ಷ ಜಾನ್ ಹೆಗೆಮನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News