‘ನಾರಾಯಣ ಗುರು ಹೇಳಿಕೆ’ ವಿರುದ್ಧ ಆರೆಸ್ಸೆಸ್ ಸಂಘಟನೆಯ ನಿರ್ಣಯ

Update: 2016-12-17 09:24 GMT

ಕ್ಯಾಲಿಕಟ್,ಡಿ. 17: ಶ್ರೀನಾರಾಯಣ ಗುರುವಿನ “ನಮಗೆ ಜಾತಿಯಿಲ್ಲ” ಎಂಬ ಉದ್ಧರಣೆ ಸುಳ್ಳುದಾಖಲೆಯಾಗಿದೆ ಎಂದು ಆರೆಸ್ಸೆಸ್ ನ ಭಾರತೀಯ ವಿಚಾರಕೇಂದ್ರಮ್ ಕೈಗೊಂಡ ನಿರ್ಣಯವನ್ನು ಎಸ್‌ಎನ್‌ಡಿಪಿ ಸದಸ್ಯರು ಕಟುವಾಗಿ ಟೀಕಿಸಿದ್ದಾರೆಂದು ವರದಿಯಾಗಿದೆ. ಶ್ರೀಗುರು ಅವರನ್ನು ನಿಂದಿಸುವ ನಿರ್ಣಯವನ್ನು ಹಿಂಪಡೆದು ಕೇರಳದ ಜನರಲ್ಲಿ ಕ್ಷಮೆ ಯಾಚಿಸಬೇಕೆಂದು ಎಸ್‌ಎನ್‌ಡಿಪಿ ಕೋಝಿಕ್ಕೋಡ್ ಯೂನಿಯನ್ ಸಹಿತ ಸಂಘಟನೆಗಳು ಹೇಳಿವೆ. ಇದು ಎಸ್‌ಎನ್‌ಡಿಪಿ ನೇತೃತ್ವ ನೀಡುವ ಬಿಡಿಜೆಎಸ್ ಮತ್ತು ಬಿಜೆಪಿ ನಡುವಿನ ಸಂಬಂಧದಲ್ಲಿ ಬಿರುಕು ಸೃಷ್ಟಿಸಲು ಕಾರಣವಾಗಬಹುದು ಎನ್ನಲಾಗುತ್ತಿದೆ.

ಆರೆಸ್ಸೆಸ್ ನಿಯಂತ್ರಣದ ಭಾರತೀಯ ವಿಚಾರಕೇಂದ್ರದ ವಾರ್ಷಿಕ ಸಮ್ಮೇಳನದಲ್ಲಿ ರಾಜ್ಯ ಪ್ರಧಾನಕಾರ್ಯದರ್ಶಿ ಕೆ.ಸಿ. ಸುಧೀರ್ ಬಾಬು ನಮಗೆ ಜಾತಿಯಿಲ್ಲ ಘೋಷಣೆ ಒಂದು ಸುಳ್ಳುದಾಖಲೆಯಾಗಿದೆ ಎಂದು ನಿರ್ಣಯ ಮಂಡಿಸಿ ಪಾಸು ಮಾಡಿದ್ದರು.

ನಿರ್ಣಯವನ್ನು ಭಾರತೀಯ ವಿಚಾರ ಕೇಂದ್ರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. 1916ರಲ್ಲಿ ಶ್ರೀನಾರಾಯಣ ಗುರು ಅವರ "ನಮಗೆ ಜಾತಿಯಿಲ್ಲ" ಘೋಷಣೆ ಅವರ ಅರಿವಿನೊಂದಿಗೆ ಅಥವಾ ಸಮ್ಮತಿಯೊಂದಿಗೆ ಉಂಟಾದುದಲ್ಲ ಎಂದು ವಿಚಾರ ಕೇಂದ್ರ ವಾದಿಸಿದೆ.

ಗುರುವಿನ ಸನ್ಯಾಸಿ ಶಿಷ್ಯರಾಗಿದ್ದ ಶ್ರೀನಾರಾಯಣ ಚೈತನ್ಯ ಸ್ವಾಮಿ ತನ್ನ ಸ್ಥಾನ ಇತ್ಯಾದಿಗಳನ್ನು ಸಂರಕ್ಷಿಸಲಿಕ್ಕಾಗಿ ಕೃತಕವಾಗಿ ರಚಿಸಿ ಬಹಿರಂಗಪಡಿಸಿದ ದಾಖಲೆ ಅದು. ಶ್ರೀನಾರಾಯಣ ಗುರುವಿನ ಹೆಸರಿನ ಆಶ್ರಮಗಳ ಮತ್ತು ಇತರ ಆಸ್ತಿಗಳ ಆಡಳಿತ ಅಧಿಕಾರವನ್ನು ಜಾತಿಯಲ್ಲಿ ನಾಯರ್ ಆಗಿದ್ದ ಶ್ರೀನಾರಾಯಣ ಚೈತನ್ಯ ಸ್ವಾಮಿಗೆ ಬರಹದ ಮೂಲಕ ನಾರಾಯಣ ಗುರು ಬರೆದಾಗ ಈಯವ ಸನ್ಯಾಸಿಗಳು ಮತ್ತು ಮತ್ತು ಎಸ್‌ಎನ್‌ಡಿಪಿ ಸಭೆ ನೇತೃತ್ವವು ಅದನ್ನು ರದ್ದು ಪಡಿಸಬೇಕೆಂದು ನಿರ್ಣಯಕೈಗೊಂಡು ಶ್ರೀನಾರಾಯಣ ಗುರುವನ್ನು ಆಗ್ರಹಿಸಿದ್ದರು. ವಿರೋಧ ಪ್ರಬಲವಾದಾಗ ಚೈತನ್ಯ ಸ್ವಾಮಿ ಕೃತಕವಾಗಿ ದಾಖಲೆ ಉಂಟುಮಾಡಿ ನಾರಾಯಣಗುರುವಿಗೆ ತೋರಿಸದೆ ಸಹಿಹಾಕಿಸದೆ ಬಹಿರಂಗಪಡಿಸಿದ ಘೋಷಣೆ ಅದು ಎಂದು ಭಾರತೀಯ ವಿಚಾರ್ ಕೇಂದ್ರದ ನಿರ್ಣಯ ಹೇಳುತ್ತಿದೆ. 1961ರಲ್ಲಿ ಗುರು ಬದುಕಿದ್ದಾಗ ಸಹಿಹಾಕದ ದಾಖಲೆಯಲ್ಲಿ 2016ರಲ್ಲಿ ಕೇರಳ ಸರಕಾರ ನಾರಾಯಣ ಗುರುವೆಂದು ಬರೆದು ಸುಳ್ಳುಪ್ರಮಾಣಪತ್ರವನ್ನು ಸೃಷ್ಟಿಸಿ ಸರಕಾರ ನಮಗೆ ಜಾತಿಯಿಲ್ಲ ಎಂಬ ಕ್ಯಾಲೆಂಡರ್ ಹೊರಡಿಸಿದೆ. ಇದನ್ನು ಸರಕಾರ ಹಿಂಪಡೆಯಬೇಕೆಂದು ನಿರ್ಣಯ ಆಗ್ರಹಿಸಿದೆ.

ಶ್ರೀನಾರಾಯಣ ಗುರುವಿನ’ನಮಗೆ ಜಾತಿಯಿಲ್ಲ ಘೋಷಣೆ’ ಸುಳ್ಳು ದಾಖಲೆಯಾಗಿದೆ ಎಂಬ ಭಾರತೀಯ ವಿಚಾರ ಕೇಂದ್ರ ನಿರ್ಣಯದ ಕುರಿತು ತಾನೇನು ಹೇಳುವುದಿಲ್ಲ ಎಂದು ಎಸ್‌ಎನ್‌ಡಿಪಿ ಸಭೆ ಪ್ರಧಾನಕಾರ್ಯದರ್ಶಿ ವೆಳ್ಳಪಳ್ಳಿ ನಟೇಶನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಿರ್ಣಯವನ್ನು ಪರಿಶೀಲಿಸಿದ ಬಳಿಕವೇ ಪ್ರತಿಕ್ರಿಯಿಸುತ್ತೇನೆ ಎಂದು ಬಿಡಿಜೆಎಸ್ ಅಧ್ಯಕ್ಷ ತುಷಾರ್ ವೆಳ್ಳಾಪಳ್ಳಿ ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News