ಭಿಕ್ಷೆ ಬೇಡಲು ಲೈಸನ್ಸ್ ಕೊಡಿ, ವಿಕಲಚೇತನರ ಅಳಲು!

Update: 2016-12-19 14:35 GMT

ಬೆಂಗಳೂರು, ಡಿ.19: ವಿಕಲಚೇತನರ ಸಮಸ್ಯೆಗಳಿಗೆ ಪರಿಹಾರ ನೀಡಲು ಮುಂದಾಗದ ಕೇಂದ್ರ ಮತ್ತು ರಾಜ್ಯಸರಕಾರಗಳು, ನಿರುದ್ಯೋಗಿ ವಿಕಲಚೇತನರಿಗೆ ಭಿಕ್ಷೆ ಬೇಡಲಾದರೂ, ಪರವಾನಿಗೆ ಕೊಟ್ಟು ಬಿಡಿ ಎಂದು ವಿಕಲಚೇತನರು ಕಣ್ಣೀರು ಹಾಕಿದರು.

   ಸೋಮವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನದಲ್ಲಿರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯನ್ನು ಪ್ರತ್ಯೇಕಗೊಳಿಸಿ ಸ್ವತಂತ್ರ ಸಚಿವಾಲಯವೆಂದು ಘೋಷಣೆ ಮಾಡುವ ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ರಾಜ್ಯ ನಿರುದ್ಯೋಗಿ ವಿಕಲಚೇತನರ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ನಿರುದ್ಯೋಗಿ ವಿಕಲಚೇತನರು ಪಾಲ್ಗೊಂಡು ಉದ್ಯೋಗ ಅವಕಾಶ  ಕಲ್ಪಿಸಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ನಿರುದ್ಯೋಗಿ ವಿಕಲಚೇತನರ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಅಂಬಾಜಿ ಪಿ.ಮೇಟಿ, ಕರ್ನಾಟಕದಲ್ಲಿ 2011ನೆ ಜನಗಣತಿ ಪ್ರಕಾರ 13 ಲಕ್ಷ ವಿಕಲಚೇತನರಿದ್ದು, ಇದೀಗ ಸರಿಸುಮಾರು 15 ಲಕ್ಷ ವಿಕಲಚೇತನರಿದ್ದಾರೆ. ಇದರಲ್ಲಿ ಐದು ಲಕ್ಷ ಹೆಚ್ಚು ಮಂದಿ ನಿರುದ್ಯೋಗಿಗಳಾಗಿ ಜೀವನ ಸಾಗಿಸುವಲ್ಲಿ ತುಂಬಾ ತೊಂದರೆಯಲ್ಲಿದ್ದಾರೆ. ಇನ್ನು ಐದು ಲಕ್ಷ ವಿಕಲಚೇತನರಲ್ಲಿ ವಿದ್ಯಾವಂತರು, ಅವಿದ್ಯಾವಂತರು, ಇವೆರೆಲ್ಲಾರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ ಎಂದು ಹೇಳಿದರು.

  ರಾಜ್ಯದಲ್ಲಿ ಬಾಕಿ ಉಳಿದಿರುವ ವಿಕಲಚೇತನರ ಬ್ಯಾಕಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. 2007-08ನೆ ಸಾಲಿನಲ್ಲಿ ನೇಮಕಗೊಂಡು ಎನ್‌ಪಿಆರ್‌ಪಿಡಿ ಯೋಜನೆಯಡಿ ಗೌರವ ಧನ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವವರನ್ನು ಖಾಯಂಗೊಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಮುಖಂಡರಾದ ಧರ್ಮಣ್ಣಾ ನವಣಿ, ಖಾಸಿಂಸಾಬ ಡೊಂಗರಗಾಂವ, ಬಸವರಾಜ ಜೆ.ಹಡಪದ, ಪ್ರವೀಣ ಕಡಿಬಾಗಿಲ ಸೇರಿ ಪ್ರಮುಖರು ಹಾಜರಿದ್ದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News