ವಿಶಿಷ್ಟವಾಗಿ ಹೊಸ ವರ್ಷಕ್ಕೆ ಸ್ವಾಗತ ಕೋರಲಿರುವ ಸಚಿವ ಆಂಜನೇಯ
Update: 2016-12-21 16:08 IST
ಬೆಂಗಳೂರು, ಡಿ.21: ಸಚಿವರಾದ ಬಳಿಕ ಪ್ರತಿ ವರ್ಷಾಂತ್ಯವನ್ನು ಬುಡಕಟ್ಟು ಜನರ ಹಾಡಿಯಲ್ಲಿ ಕಳೆದು ಹೊಸ ವರ್ಷವನ್ನು ಸ್ವಾಗತಿಸುವ ಪರಿಪಾಠ ಬೆಳೆಸಿಕೊಂಡಿರುವ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್.ಆಂಜನೇಯ ಈ ಬಾರಿಯೂ ಅದನ್ನು ಮುಂದುವರಿಸಲಿದ್ದಾರೆ.
ಇದಕ್ಕಾಗಿ ಈ ಸಲ ಸಚಿವರು ಆಯ್ದುಕೊಂಡಿರುವುದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಲ್ತೋಂಡು ಗ್ರಾಪಂನ ಮುರೂರು ಕೊರಗರ ಹಾಡಿ. ಇಲ್ಲಿನ ಮರ್ಲಿ ಕೋಂ: ಮರ್ಲ ಕೊರಗ ಎಂಬವರ ಮನೆಯಲ್ಲಿ ಸಚಿವರು ವಾಸ್ತವ್ಯ ಹೂಡಲಿದ್ದಾರೆ. ಸಚಿವರ ವಾಸ್ತವ್ಯದ ಬಳಿಕ ಈ ಹಾಡಿಯ ಸಮಸ್ಯೆಗಳನ್ನು ಗುರುತಿಸಿ ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದಾರೆ.
ಮುರೂರು ಕೊರಗರ ಹಾಡಿಯಲ್ಲಿ 10 ಕುಟುಂಬಗಳಿದ್ದು, 45ರಿಂದ 50 ಮಂದಿ ವಾಸಿಸುತ್ತಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.