ದುಬೈಯ ಅನಿವಾಸಿ ಭಾರತೀಯನ ಬಳಿ ಇದೆ ಹತ್ತು ಸಾವಿರದ ನೋಟು!

Update: 2016-12-22 04:09 GMT

ದುಬೈ, ಡಿ.22: ಭಾರತದಲ್ಲಿ ನೋಟು ರದ್ದತಿ ಬಿರುಗಾಳಿ ಎದ್ದು ತಿಂಗಳು ಕಳೆದಿದ್ದು, ಕೇಂದ್ರದ ನಿರ್ಧಾರದ ಬಗ್ಗೆ ಪರ- ವಿರೋಧ ಚರ್ಚೆಗಳು ನಡೆಯುತ್ತಿವೆ. ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೆನ್, ಮನಮೋಹನ್ ಸಿಂಗ್ ಸೇರಿದಂತೆ ಹಲವರು ಇದನ್ನು ವಿರೋಧಿಸಿದ್ದರೆ, ಸರ್ಕಾರದ ನಡೆಗೆ ಹಲವು ಮಂದಿ ಬೆಂಬಲ ಸೂಚಿಸಿದ್ದಾರೆ.

ದೇಶದಲ್ಲಿ ಜನ ಕಠಿಣ ದುಡಿಮೆಯಿಂದ ಗಳಿಸಿದ ಹಣವನ್ನು ಹೊಸ ನೋಟುಗಳಾಗಿ ಬದಲಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೆ, ದುಬೈನಲ್ಲಿ ವಾಸವಾಗಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು 10 ಸಾವಿರ ರೂಪಾಯಿ ಮುಖಬೆಲೆಯ ನೋಟು ಹೊಂದಿರುವ ಅಂಶ ಬೆಳಕಿಗೆ ಬಂದಿದೆ. 10000 ರೂಪಾಯಿ ನೋಟನ್ನು 1978ರಲ್ಲಿ ರದ್ದುಪಡಿಸಲಾಗಿತ್ತು. ಆಗಲೂ ಕಪ್ಪುಹಣದ ವಿರುದ್ಧ ಸಮರ ಸಾರುವ ಸಲುವಾಗಿ ಅಧಿಕ ಮೌಲ್ಯದ ನೋಟು ನಿಷೇಧಿಸಲಾಗಿತ್ತು.

ದುಬೈ ಮೂಲಕದ ನಾಣ್ಯ ಹಾಗೂ ಪದಕ ತಯಾರಿಕಾ ಕಂಪನಿಯ ಮಾಲಕರಾದ ರಾಜ್‌ಕುಮಾರ್ ಈ ನೋಟು ಹೊಂದಿದ್ದಾರೆ. ಭಾರತದ ಸಂಗ್ರಾಹಕರೊಬ್ಬರಿಂದ ಇದನ್ನು 2015ರಲ್ಲಿ ಪಡೆದಿದ್ದಾರೆ. 1978ರಲ್ಲಿ ನೋಟು ರದ್ದತಿ ನಿರ್ಧಾರ ಪ್ರಕಟಿಸಿದಾಗ ಆರ್‌ಬಿಐ, ಕೇವಲ 346 ನೋಟುಗಳು ಚಲಾವಣೆಯಲ್ಲಿವೆ ಎಂದು ಹೇಳಿತ್ತು. ಈ ಪೈಕಿ ಕೇವಲ 10 ನೋಟುಗಳು ಮಾತ್ರ ಇಂದು ಲಭ್ಯ.

ರಾಜ್‌ಕುಮಾರ್ ಅವರ ಬಳಿ ಇರುವ ಈ ನೋಟು ಯುಎಇ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ಇರುವ ಏಕೈಕ ಇಂಥ ನೋಟು. ಇದೀಗ ಈ ನೋಟು ಅಲ್ ಮಕ್ತುಂ ಬೀದಿರ ದೋಹಾ ಸೆಂಟರ್‌ನಲ್ಲಿರುವ ನ್ಯುಮಿಸ್ಬಿಂಗ್ ಶೋರೂಂನದಲ್ಲಿ ಪ್ರದರ್ಶನಕ್ಕೆ ಇದೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News