ಮೂರು ಅಂತಸ್ತಿನ ಕಟ್ಟಡ ಕುಸಿತ, ಹಲವರಿಗೆ ಗಾಯ
Update: 2017-01-08 09:46 IST
ಬೆಂಗಳೂರು, ಜ.8: ಬೆಂಗಳೂರಿನ ವೈಟ್ ಪೀಲ್ಡ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪರಿಣಾಮ ಮೂವರಿಗೆ ಗಾಯಗೊಂಡಿದ್ದು ಅವಶೇಷದಡಿಯಲ್ಲಿ ಹಲವರು ಸಿಲುಕಿರುವ ಘಟನೆ ಇಂದು ನಡೆದಿದೆ.
2ನೇ ಮಹಡಿಯಲ್ಲಿ ರಾತ್ರಿ ವೇಳೆಯಲ್ಲಿ ಕಾಂಕ್ರಿಟ್ ಹಾಕುತ್ತಿದ್ದಾಗ ಅವಘಡ ಸಂಭವಿಸಿದೆ. ಅಕ್ಸೆಂಚರ್ ಸಾಫ್ಟವೇರ್ ಸಂಸ್ಥೆಗೆ ನಿರ್ಮಾಣವಾಗುತ್ತಿದ್ದ ಕಟ್ಟಡವನ್ನು ದಿವ್ಯಶ್ರಿ ಕಟ್ಟಡ ನಿರ್ಮಾಣ ಸಂಸ್ಥೆ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿದೆ.
ವೈಟ್ ಪೀಲ್ಡ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.