ಸ್ತ್ರೀಯರ ಮೇಲಿನ ದೌರ್ಜನ್ಯ ನಿಲ್ಲಲಿ

Update: 2017-01-11 18:52 GMT

ಮಾನ್ಯರೆ,
ಸರಕಾರಗಳು ಸ್ತ್ರೀಯರ ಏಳಿಗೆಗಾಗಿ ಹತ್ತು ಹಲವಾರು ಯೋಜನೆಗಳನ್ನು ತರುತ್ತಿವೆ. ಆದರೆ ಯಾವುದೇ ಯೋಜನೆಯಿಂದ ಮಹಿಳೆಯರ ಕಲ್ಯಾಣ ಕಾಣುತ್ತಿಲ್ಲ. ಮಹಿಳಾ ಕಲ್ಯಾಣ ಆಯೋಗಗಳು ಕೆಲವೊಂದು ಪರಿಸ್ಥಿತಿಗಳಲ್ಲಿ ಸ್ತ್ರೀಯರ ಪರವಾಗಿ ಕೆಲವು ಹೇಳಿಕೆಗಳನ್ನು ನೀಡುವುದರ ಹೊರತು ಸ್ತ್ರೀಯರ ಸಹಾಯಕ್ಕೆ ಬರುವಂತೆ ಕಾಣುತ್ತಿಲ್ಲ. ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಸ್ತ್ರೀಯರ ರಕ್ಷಣೆಗಾಗಿ ಹಾಗೂ ನ್ಯಾಯಕ್ಕಾಗಿ ಗರಿಷ್ಠ ಪ್ರಯತ್ನ ಮಾಡುತ್ತಿದ್ದರೂ, ವಿಕೃತ ಮನುಷ್ಯರಿಗೆ ಶಿಕ್ಷೆಯಾಗುತ್ತಿಲ್ಲ.
ಮದ್ಯಪಾನದಂತಹ ಮಾದಕ ಚಟಗಳು ಯುವಜನತೆಯನ್ನು ಹಾದಿ ತಪ್ಪಿಸಿ ದುಷ್ಕೃತ್ಯಗಳಿಗೆ ಪ್ರೇರೇಪಿಸುತ್ತಿದೆ. ಆದರೆ ಇಂತಹ ಚಟಗಳಿಂದಾಗಿ ಮನೆ, ಔದ್ಯೋಗಿಕ ಸ್ಥಳ ಮತ್ತು ಸಭೆ ಸಮಾರಂಭಗಳಲ್ಲಿ ಚಿತ್ರಹಿಂಸೆ ಅಥವಾ ದೌರ್ಜನ್ಯಕ್ಕೆ ಒಳಗಾಗುವುದು ಸ್ತ್ರೀಯರು ಮಾತ್ರ.


ಇದುವರೆಗಿನ ಯಾವ ಸರಕಾರವೂ ಮದ್ಯಪಾನ ನಿಷೇಧಿಸುವುದರ ಮೂಲಕ ಸ್ತ್ರೀಯರ ಬೆಂಬಲಕ್ಕೆ ನಿಂತಿಲ್ಲ. ಬದಲಾಗಿ ಕೇವಲ ಸ್ತ್ರೀಯರ ವಸ್ತ್ರಧಾರಣೆಯನ್ನು ನೆಪವಾಗಿಟ್ಟು ವಿಕೃತ ಮಾನಸಿಕ ಪುರುಷರನ್ನು ಸಮರ್ಥಿಸುತ್ತವೆ. ಸರಕಾರಗಳು ಎಲ್ಲಿಯವರೆಗೆ ಎಲ್ಲಾ ರೀತಿಯ ಅಮಲು ಪದಾರ್ಥವನ್ನು ನಿಷೇಧಿಸುವುದಿಲವೋ, ಅಲ್ಲಿಯವರೆಗೆ ದೇಶದೆಲ್ಲೆಡೆ ಸ್ತ್ರೀಯರ ಮೇಲಿನ ದೌರ್ಜನ್ಯ ಮತ್ತು ಚಿತ್ರಹಿಂಸೆ ನಡೆಯುತ್ತಲೇ ಇರುತ್ತದೆ. ಸರಕಾರವು ಮದ್ಯ, ಅಮಲು ಪದಾರ್ಥಗಳಂತಹ ಎಲ್ಲ ಮಾದಕ ವಸ್ತುಗಳನ್ನು ನಿಷೇಧಿಸುವಂತೆ ಮಹಿಳಾ ಸಂಘಟನೆಗಳು ಗಟ್ಟಿ ಧ್ವನಿಯಲ್ಲಿ ಒತ್ತಡ ಹೇರಬೇಕಾಗಿದೆ. 

Writer - -ಸಾಜಿದಾ ಮೂಮಿನ್, ಮಂಗಳೂರು

contributor

Editor - -ಸಾಜಿದಾ ಮೂಮಿನ್, ಮಂಗಳೂರು

contributor

Similar News