ಡೊನಾಲ್ಡ್ ಟ್ರಂಪ್ ವಿರುದ್ಧ ಜ.21ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

Update: 2017-01-19 12:21 GMT

ಬೆಂಗಳೂರು , ಜ.19 : ಅಮೆರಿಕಾದ ನೂತನ  ಅಧ್ಯಕ್ಷ  ಡೊನಾಲ್ಡ್ ಟ್ರಂಪ್ರ ವಿರುದ್ಧ ಜ.21ರಂದು ಜಗತ್ತಿನಾದ್ಯಂತ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಬೆಂಗಳೂರಿನಲ್ಲಿ ಪುರಭವನದ ಎದುರು ಸಂಜೆ 5 ಕ್ಕೆ ಬೃಹತ್ ಪ್ರತಿಭಟನಾ ಸಭೆಯು ನಡೆಯಲಿದೆ.

ಡೊನಾಲ್ಡ್ ಟ್ರಂಪ್ ರ ಮುಸ್ಲಿಂ ವಿರೋಧಿ  , ಮಹಿಳಾ ವಿರೋಧಿ ಮತ್ತು ಸ್ವತಃ ಬಂಡವಾಳಶಾಹಿತ್ವ ಪ್ರತಿಪಾದಕ ಬಿಲಿಯನೇರ್ ಆಗಿರುವ ಅವರ ಕಾರ್ಮಿಕ ವಿರೋಧಿ  ನೀತಿಗಳು ಕೇವಲ ಅಮೇರಿಕಾ ಗೆ ಮಾತ್ರವಲ್ಲ , ಇಡೀ ಜಗತ್ತಿಗೆ ಅಪಾಯಕಾರಿಯಾಗಿ ಪರಿಣಮಿಸಲಿದ್ದು , ಅವರ ಅಧಿಕಾರ ಸ್ವೀಕಾರದ ಆರಂಭದಲ್ಲೆ ಪ್ರತಿರೋಧ ತೋರಬೇಕಾದ ಅನಿವಾರ್ಯತೆ ಎದುರಾಗಿದೆ.  

ಇಡೀ ಜಗತ್ತು ಜ.21ರಂದು ತನ್ನ ಪ್ರತಿಭಟನೆಯನ್ನು ನಡೆಸಲಿದ್ದು , ಟ್ರಂಪ್ ರೀತಿಯ ನೀತಿಗಳನ್ನೇ ಪ್ರತಿಪಾದಿಸುವ ಆಡಳಿತದಲ್ಲಿ ಭಾರತ ನಲುಗುತ್ತಿರುವುದರಿಂದ ಮತ್ತು ಸ್ವತಃ ಅವರ ಗೆಲುವಿಗೆ ಭಾರತೀಯ ಬಲಪಂಥೀಯವಾದಿಗಳು ಬಹಿರಂಗವಾಗಿಯೇ ಶ್ರಮಿಸಿರುವುದು ಮುಂದಿನ ದಿನಗಳು ಭಾರತೀಯರ ಪಾಲಿಗೆ ಇನ್ನಷ್ಟು ಕ್ರೂರವಾಗಿರಲಿದೆ ಎನ್ನುವುದರ ಸಂಕೇತ.  ಸ್ವತಃ ಟ್ರಂಪ್  ಕೂಡಾ ಭಾರತದ ಪ್ರಸಕ್ತ ಆಡಳಿತವನ್ನು ಹಾಡಿ ಹೊಗಳಿರುವುದು ಕೂಡಾ ಇಲ್ಲಿ ಉಲ್ಲೇಖನೀಯ.

ಆದುದರಿಂದ  ಟ್ರಂಪ್ ವಿರುದ್ಧ ಜ.21ರಂದು ನಡೆಯಲಿರುವ ಈ ಪ್ರತಿಭಟನೆಯನ್ನು ಬೆಂಬಲಿಸಿ ‘ ಕಮಿಟಿ ಫಾರ್ ಎ ಇಂಟರ್ ನ್ಯಾಷನಲ್ ‘ ನ  ಭಾರತದ ಅಂಗ ಸಂಘಟನೆ  ‘ ನ್ಯೂ ಸೋಷಿಯಲಿಸ್ಟ ಆಲ್ಟರ್ನೇಟಿವ್ ’  ಬೆಂಗಳೂರಿನಲ್ಲಿ ಪುರಭವನದ ಎದುರು ಸಂಜೆ 5 ಕ್ಕೆ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿದೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News