ಶುರುವಾಗಲಿ ಮಲ್ಯರ 6,203 ಕೋ.ರೂ.ಸಾಲದ ವಸೂಲಿ : ಬ್ಯಾಂಕುಗಳಿಗೆ ಡಿಆರ್‌ಟಿ ನಿರ್ದೇಶ

Update: 2017-01-19 12:40 GMT

ಬೆಂಗಳೂರು,ಜ.19: ಕಿಂಗ್‌ಫಿಷರ್ ಏರ್‌ಲೈನ್ಸ್ ಪ್ರಕರಣದಲ್ಲಿ 6,203 ಕೋ.ರೂ. ಸಾಲವನ್ನು ವಾರ್ಷಿಕ 11.5 ಬಡ್ಡಿಯೊಂದಿಗೆ ಮಾಜಿ ಮದ್ಯದ ದೊರೆ ವಿಜಯ ಮಲ್ಯ ಮತ್ತು ಅವರ ಕಂಪನಿಗಳಿಂದ ವಸೂಲು ಮಾಡುವ ಪ್ರಕ್ರಿಯೆಯನ್ನು ಆರಂಭಿಸುವಂತೆ ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಕೂಟಕ್ಕೆ ಸಾಲ ವಸೂಲಿ ನ್ಯಾಯಾಧಿಕರಣ (ಡಿಆರ್‌ಟಿ)ವು ಗುರುವಾರ ನಿರ್ದೇಶ ನೀಡಿದೆ.

‘‘ಮಲ್ಯ ಮತ್ತು ಯುಬಿಎಚ್‌ಎಲ್, ಕಿಂಗ್‌ಫಿಷರ್ ಫಿನ್‌ವೆಸ್ಟ್ ಮತ್ತು ಕಿಂಗ್‌ಫಿಷರ್ ಏರ್‌ಲೈನ್ಸ್ ಸೇರಿದಂತೆ ಅವರ ಕಂಪನಿಗಳಿಂದ ಈ ಸಾಲಮೊತ್ತವನ್ನು ಬಡ್ಡಿಸಹಿತ ವಸೂಲು ಮಾಡಲು ಅಗತ್ಯ ಪ್ರಕ್ರಿಯೆಯನ್ನು ಆರಂಭಿಸುವಂತೆ ನಾನು ಬ್ಯಾಂಕರ್‌ಗಳಿಗೆ ನಿರ್ದೇಶ ನೀಡುತ್ತಿದ್ದೇನೆ ’’ ಎಂದು ಡಿಆರ್‌ಟಿ ಅಧ್ಯಕ್ಷ ಕೆ.ಶ್ರೀನಿವಾಸನ್ ಅವರು ತನ್ನ ಆದೇಶದಲ್ಲಿ ಹೇಳಿದ್ದಾರೆ.

ಇಲ್ಲಿ ಬಾಡಿಗೆ ಕಟ್ಟಡದಲ್ಲಿ ಇಂದು ಉದ್ಘಾಟನೆಗೊಂಡ ಡಿಆರ್‌ಟಿ ಕಚೇರಿಯಲ್ಲಿ ಕಲಾಪವನ್ನು ಆರಂಭಿಸಿದ ಶ್ರೀನಿವಾಸನ್ ಅವರು ಮಲ್ಯ ಮತ್ತು ಅವರ ಕಂಪನಿಗಳ ಅರ್ಜಿಗಳು ಸೇರಿದಂತೆ 20 ವಾದಕಾಲೀನ ಅರ್ಜಿಗಳನ್ನೂ ವಿಲೇವಾರಿಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News