‘ಮಹಾ ಯೋಜನೆ’ ಹಿಂದಿರುವ ಅಜೆಂಡಾ ಏನು?

Update: 2017-01-20 18:55 GMT

ಮಾನ್ಯರೆ,
ಬಿಡಿಎ(ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) 2031ರ ಪರಿಷ್ಕೃತ ಮಹಾಯೋಜನೆ ಸಿದ್ಧಪಡಿಸಿದೆ. ವಾಸ್ತವವೇನೆಂದರೆ ಸಂವಿಧಾನದ 74ನೆ ತಿದ್ದುಪಡಿ ಬಳಿಕ ಮಹಾಯೋಜನೆ ಸಿದ್ಧಪಡಿಸುವ ಅಧಿಕಾರ ಇರುವುದು ಕೇವಲ ಬಿಎಂಪಿಸಿಗೆ. ಅಂದರೆ ಬೆಂಗಳೂರು ಮಹಾನಗರ ಯೋಜನಾ ಸಮಿತಿಗೆ. ಆದರೆ ಬಿಡಿಎ, ಈ ಯೋಜನೆಯನ್ನು ಹೇಗೆ ಸಿದ್ಧಪಡಿಸಿದೆ..? ಇದಕ್ಕೆ ಬಿಡಿಎಗೆ ಅಧಿಕಾರ ಕೊಟ್ಟವರು ಯಾರು..? ಎಂಬ ಪ್ರಶ್ನೆಗೆ ಬಿಡಿಎ ಉತ್ತರ ನೀಡಬೇಕಾಗಿದೆ.

ದಿನದಿಂದ ದಿನಕ್ಕೆ ಮಹಾನಗರಿಯಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಜನಸಂಖ್ಯೆ ನಿಯಂತ್ರಿಸಬೇಕಾದ ಕಾಲಘಟ್ಟದಲ್ಲಿ, 2015ರ ಮಹಾಯೋಜನೆ ಇನ್ನೂ ಸಮರ್ಪಕವಾಗಿ ಜಾರಿಯಾಗದ ಈ ಸಮಯದಲ್ಲಿ ಈ ಯೋಜನೆಯ ರೂಪುರೇಷೆ ಸಿದ್ಧಪಡಿಸಿ ಏನು ಪ್ರಯೋಜನ..? 2015ರ ಮಹಾಯೋಜನೆಯಲ್ಲಿ ಉಕ್ಕಿನ ಸೇತುವೆ ನಿರ್ಮಿಸುವ ಪ್ರಸ್ತಾಪವೇ ಇರಲಿಲ್ಲ. ಆದರೆ ಈ ಯೋಜನೆಯನ್ನು ಇದ್ದಕ್ಕಿದ್ದಂತೆ ರೂಪಿಸಿ ಸೇತುವೆ ನಿರ್ಮಿಸಲು ರಾಜ್ಯ ಸರಕಾರ ಮುಂದಾಗಿದೆ. ಇದು ಹೇಗೆ ಸಾಧ್ಯವಾಯಿತು..? ಬಿಡಿಎ 2015ರ ಮಹಾಯೋಜನೆಯನ್ನು ವರ್ಷ ಕಳೆದರೂ ಯಾಕೆ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ..? ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಹಾಗೆಯೇ 2031ರ ಪರಿಷ್ಕೃತ ಮಹಾಯೋಜನೆ ಬಗ್ಗೆ ಸ್ಪಷ್ಟೀಕರಣ ನೀಡಬೇಕಾಗಿದೆ.
 

Writer - ಶಂಶೀರ್ ಬುಡೋಳಿ, ಬೆಂಗಳೂರು

contributor

Editor - ಶಂಶೀರ್ ಬುಡೋಳಿ, ಬೆಂಗಳೂರು

contributor

Similar News