ಕೇಂದ್ರ ಸಚಿವರ ಕಚೇರಿಯೆದುರು ರೈತರ ಧರಣಿ

Update: 2017-01-21 10:29 GMT

ಬೆಂಗಳೂರು, ಜ.21: ಕೇಂದ್ರ ಬಜೆಟ್‌ನಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಮತ್ತು ವಿಶೇಷ ಬರ ನಿರ್ವಹಣೆಗೆ ವಿಶೇಷ ಪ್ಯಾಕೇಜ್ ಘೋಷಿಸಲು ಒತ್ತಾಯಿಸಿ ಕೇಂದ್ರ ಸಚಿವ ಅನಂತಕುಮಾರ್ ಕಚೇರಿಯ ಮುಂದೆ ರೈತರು ಇಂದು ಪ್ರತಿಭಟನಾ ಧರಣಿ ನಡೆಸಿದರು.

ಜನಾಂದೋಲನಗಳ ಮಹಾಮೈತ್ರಿಯ ವಿಶಾಲ ವೇದಿಕೆಯಲ್ಲಿ ಎಲ್ಲ ಜನಪರ ಸಂಘಟನೆಗಳಿಂದ ರೈತರ ಪರವಾಗಿ ಘೋಷಣೆಗಳು ಮೊಳಗಿದವು.

ಕೇಂದ್ರ ಸರ್ಕಾರವು ಕಾರ್ಪೋರೇಟ್‌ನ 1.14 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದೆ. ಆದರೆ ದೇಶಕ್ಕೆ ಅನ್ನ ಕೊಡುವ ನಮ್ಮ ರೈತರ ಸಾಲ ಮನ್ನ ಮಾಡುವ ಯೋಚನೆ ಇಲ್ಲ. ಆದ್ದರಿಂದ ನಾವು ಯೋಚನೆ ಮಾಡಬೇಕಾದ ಸಮಯ ಬಂದಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News