×
Ad

ಏರೋ ಇಂಡಿಯಾ ಶೋಗಾಗಿ 300 ಮಾಂಸದಂಗಡಿಗಳು ಬಂದ್!

Update: 2017-02-09 09:21 IST

ಬೆಂಗಳೂರು, ಫೆ.9: ಯಲಹಂಕ ವಾಯುನೆಲೆ ಬಳಿ ನಡೆಸಲು ಉದ್ದೇಶಿಸಿರುವ ಏರೊ ಇಂಡಿಯಾ-2017 ಪ್ರದರ್ಶನದ ವೇಳೆ ಹಕ್ಕಿಗಳು ವಿಮಾನಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಸುತ್ತಮುತ್ತಲ ಪ್ರದೇಶಗಳ 300ಕ್ಕೂ ಹೆಚ್ಚು ಮಾಂಸದ ಅಂಗಡಿಗಳನ್ನು ಬಿಬಿಎಂಪಿ ಮುಚ್ಚಿಸಿದೆ.

ಫೆಬ್ರವರಿ 18ರಂದು ಏರೊ ಇಂಡಿಯಾ ಮುಗಿಯುವವರೆಗೂ ಈ ಅಂಗಡಿಗಳನ್ನು ತೆರೆಯಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದೆ. ಐದು ದಿನಗಳ ಪ್ರದರ್ಶನ ವೇಳೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಕೇವಲ ಸಸ್ಯಾಹಾರಿ ಊಟ- ಉಪಾಹಾರವನ್ನಷ್ಟೇ ಸಿದ್ಧಪಡಿಸುವಂತೆಯೂ ಸೂಚಿಸಲಾಗಿದೆ.

"ಈ ಭಾಗದಲ್ಲಿ 296 ಮಾಂಸದ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳನ್ನು ಮುಚ್ಚುವ ಜತೆಗೆ ಈ ವಲಯದ ಎಲ್ಲ 11 ವಾರ್ಡ್‌ಗಳಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಈ ಅವಧಿಯಲ್ಲಿ ಕೇವಲ ಸಸ್ಯಾಹಾರಿ ಊಟ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಇದನ್ನು ಉಲ್ಲಂಘಿಸುವವರಿಗೆ 2 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು" ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿ.ರಮೇಶ್ ಹೇಳಿದ್ದಾರೆ.

ಆದರೆ ಹೊರಗಿನಿಂದ ಮಾಂಸ ಖರೀದಿಸಿ ಮನೆಗಳಲ್ಲಿ ಮಾಂಸಾಹಾರ ಸಿದ್ಧಪಡಿಸುವವರ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಕೇಳಿದ ಪಶ್ನೆಗೆ ಅದನ್ನು ನಿಯಂತ್ರಿಸುವಂತಿಲ್ಲ. ಆದರೆ ಪೌರಕಾರ್ಮಿಕರು ಪ್ರತಿಮನೆಗಳಿಂದ ತ್ಯಾಜ್ಯ ಸಂಗ್ರಹಿಸಲಿದ್ದಾರೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News