ವಿವಾದಿತ ಡೈರಿಯಲ್ಲಿನ ಅಂಶಗಳು ಬಹಿರಂಗ?

Update: 2017-02-24 04:19 GMT

ಬೆಂಗಳೂರು, ಫೆ.24: ಕಾಂಗ್ರೆಸ್ ಹೈಕಮಾಂಡ್‌ಗೆ ರಾಜ್ಯ ಸರಕಾರದ ಪ್ರಭಾವಿ ಸಚಿವರು, ಶಾಸಕರ ಮೂಲಕ ಸಾವಿರ ಕೋಟಿ ರೂ.ಕಪ್ಪ ಕಾಣಿಕೆ ಸಲ್ಲಿಕೆಯಾಗಿರುವ ಸಂಬಂಧ ವಿವರಣೆ ಹೊಂದಿದೆ ಎನ್ನಲಾದ ವಿವಾದಿತ ಡೈರಿಯಲ್ಲಿನ ಅಂಶಗಳನ್ನು ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಬಹಿರಂಗಪಡಿಸಿದೆ.

ಲೋಕಸಭೆ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ, ಸ್ಟೀಲ್ ಬ್ರಿಡ್ಜ್ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಿ ಸಲ್ಲಿಸಲಾಗಿದೆ ಎಂದು ಆರೋಪಿಸಲಾಗಿದೆ. ಡೈರಿಯಲ್ಲಿ ಯಾವುದೆ ಸಚಿವರು, ಶಾಸಕರ ಹೆಸರುಗಳನ್ನು ಉಲ್ಲೇಖಿಸಲಾಗಿಲ್ಲ. ಆದರೆ, ಕೆಲವರ ಹೆಸರಿಗಳಿಗೆ ಹೊಂದಾಣಿಕೆಯಾಗುವ ರೀತಿಯಲ್ಲಿ ಇನಿಶಿಯಲ್‌ಗಳನ್ನು ಮಾತ್ರ ನಮೂದಿಸಿರುವ ಅಂಶ ಬಯಲಾಗಿದೆ.

ಡೈರಿಯಲ್ಲಿ ನಮೂದಿಸಲಾಗಿರುವ ಅಂಶಗಳು ?:

ಎಂ.ವೋರಾ-15 ಕೋಟಿ ರೂ.(ಸೆಪ್ಟಂಬರ್), ಎಂ.ವೋರಾ-10 ಕೋಟಿ ರೂ.(ಅಕ್ಟೋಬರ್), ಎಂ.ವೋರಾ- 25 ಕೋಟಿ ರೂ.(ಅಕ್ಟೋಬರ್), ಎಪಿ-5 ಕೋಟಿ ರೂ. (ಅಕ್ಟೋಬರ್), ಡಿಜಿಎಸ್-5 ಕೋಟಿ ರೂ.(ನವೆಂಬರ್), ಎಂ.ವೋರಾ-10+5 ಕೋಟಿ ರೂ.(ನವೆಂಬರ್), ಎಂ.ವೋರಾ-15 ಕೋಟಿ ರೂ.(ಡಿಸೆಂಬರ್), ಎಂ.ವೋರಾ-15 ಕೋಟಿ ರೂ.(ಜನವರಿ-16), ಡಿಜಿಎಸ್-5 ಕೋಟಿ ರೂ.(ಜನವರಿ), ಎಪಿ-3 ಕೋಟಿ ರೂ.(ಜನವರಿ), ಎವಿ-2 ಕೋಟಿ ರೂ.(ಜನವರಿ), ಎಚ್‌ಆರ್‌ಎಸ್-50 ಕೋಟಿ ರೂ., ಆರ್‌ಜಿ ಕಚೇರಿ-8 ಕೋಟಿ ರೂ., ಎಂ.ವೋರಾ-25 ಕೋಟಿ ರೂ., ಕೆಇಎಂಪಿ-3 ಕೋಟಿ ರೂ., ಡಿಕೆಎಸ್-3 ಕೋಟಿ ರೂ., ಎಚ್‌ಬಿಪಿ-15 ಕೋಟಿ ರೂ., ಮಾಧ್ಯಮಗಳಿಗೆ-7 ಕೋಟಿ ರೂ., ಟಿ-130 ಕೋಟಿ ರೂ.

ಲೋಕಸಭಾ ಚುನಾವಣೆ: ಕೆಜೆಜಿ+ಎಂಬಿಪಿ-219 ಕೋಟಿ ರೂ., ಎಚ್‌ಸಿಎಂ- 47 ಕೋಟಿ ರೂ., ಎಸ್‌ಬಿ-23 ಕೋಟಿ ರೂ., ಇತರರು-16.75 ಕೋಟಿ ರೂ., ಕೆಜೆಜಿ+ಎಂಬಿಪಿ-24 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಆರೋಪಿಸಲಾಗಿದೆ. 

ನನ್ನನ್ನು ಯಾರೂ ಆರ್‌ವಿಡಿ ಎಂದು ಕರೆಯುವುದಿಲ್ಲ. ಈ ಡೈರಿಗೆ ಸಂಬಂಧಿಸಿದ ವಿಚಾರ ನನಗೆ ತಿಳಿದಿಲ್ಲ. ಈ ಸಂಬಂಧ ತನಿಖೆ ನಡೆದು ಸತ್ಯಾಂಶ ಹೊರಬರಲಿ. ತಪ್ಪಿತಸ್ಥರಿಗೆ ಕಾನೂನು ರೀತಿ ಶಿಕ್ಷೆಯಾಗಲಿ.
-ಆರ್.ವಿ.ದೇಶಪಾಂಡೆ, ಕೈಗಾರಿಕೆ ಸಚಿವ

‘ಮಾಧ್ಯಮಗಳಲ್ಲಿ ಹೇಳುತ್ತಿರುವ ಡೈರಿಗೂ ನನಗೂ ಯಾವುದೇ ಸಂಬಂಧವಿಲ್ಲ. ಡೈರಿ ಹೆಸರಿನಲ್ಲಿ ನನ್ನ ವಿರುದ್ಧದ ಆರೋಪಗಳು ಆಧಾರ ರಹಿತ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನನ್ನ ಮನೆಯ ಮೇಲೆ ದಾಳಿ ನಡೆಸಿದ ವೇಳೆ ಯಾವುದೇ ಡೈರಿಯೂ ಸಿಕ್ಕಿಲ್ಲ. ಇದು ಸೃಷ್ಟಿಯಾಗಿರುವ ಡೈರಿ. ಬರವಣಿಗೆಯೂ ನನ್ನದಲ್ಲ, ತನಿಖೆಯ ವೇಳೆ ಈ ವಿಷಯ ತಿಳಿಸಿದ್ದೇನೆ’
-ಗೋವಿಂದರಾಜು ಮೇಲ್ಮನೆ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News