ಜಲ್ಲಿಕಟ್ಟು ಹೋರಾಟಗಾರರಿಂದ ಹೊಸ ರಾಜಕೀಯ ಪಕ್ಷ

Update: 2017-02-26 07:48 GMT

ಚೆನ್ನೈ,ಫೆ. 26: ಜಲ್ಲಿಕಟ್ಟು ಪ್ರತಿಭಟನೆಯ ಮೂಲಕ ಶಕ್ತಿ ಪ್ರದರ್ಶಿಸಿದ ಯುವಕರು ರಾಜಕೀಯ ಪಕ್ಷವೊಂದನ್ನು ಹುಟ್ಟುಹಾಕಿದ್ದಾರೆ. 'ಎನ್ ದೇಶಂ,ಎನ್ ಉರುಮೈ' (ನನ್ನ ದೇಶ ನನ್ನ ಹಕ್ಕು) ಎನ್ನುವ ಹೆಸರಿನ ಪಕ್ಷದ ಘೋಷಣೆ ಕಾರ್ಯಕ್ರಮದಲ್ಲಿ ಅಪಾರ ಯುವಕರು ಭಾಗವಹಿಸಿದ್ದಾರೆ. ರಾಷ್ಟ್ರಧ್ವಜದ ಬಣ್ಣದಲ್ಲಿರುವ ಪಕ್ಷದ ಧ್ವಜದಲ್ಲಿ ದಾಸ್ಯಸಂಕಲೆಯಿಂದ ಬಿಡಿಸಿಕೊಳ್ಳುವ ಯುವಕನ ಚಿತ್ರವಿದೆ. ಇದು ಜಲ್ಲಿಕಟ್ಟಿನವರ ಪಕ್ಷದ ಧ್ವಜವಾಗಿದೆ.

 ಪದಾಧಿಕಾರಿಗಳಾಗಲು ಇಷ್ಟಪಡುವವರು ಪ್ರಶ್ನೆಗಳಿಗೆ ವಿವರವಾಗಿ ಉತ್ತರ ನೀಡಬೇಕಾಗುತ್ತದೆ. ತಮಿಳುನಾಡಿನ ಭ್ರಷ್ಟಾಚಾರವನ್ನು ತೊಡೆದುಹಾಕಲು ಏನು ಮಾಡಬೇಕು. ವಾಸವಿರುವ ಸ್ಥಳದಲ್ಲಿ ಇರುವ ಪ್ರಭಾವ, ರೈತರ ರಕ್ಷಣೆಗಾಗಿ ಮಾಡಬೇಕಾದ ಕೆಲಸಗಳು, ಮಹಿಳಾ ಸುರಕ್ಷಿತಗೆ ಅಗತ್ಯವಿರುವ ಕ್ರಮಗಳು, ಪದಾಧಿಕಾರ ವಹಿಸಿಕೊಳ್ಳುವ ಬಗ್ಗೆ ಅಭಿಪ್ರಾಯ, ಯುವಕರಿಗೆ ಉದ್ಯೋಗ ಹೆಚ್ಚಿಸುವುದಕ್ಕೆ ಯೋಜನೆಗಳು, ಈಗಿನ ವ್ಯವಸ್ಥೆಗೆ ಬದಲಿಯಾಗಿ ಸೂಚಿಸು ಹೊಸ ವ್ಯವಸ್ಥೆಗಳು, ಪಕ್ಷವನ್ನು ಬಲಪಡಿಸುವ ಕುರಿತು ಐದು ಸಲಹೆಗಳು ಮುಂತಾದ ಪ್ರಶ್ನೆ ಪಟ್ಟಿಯಲ್ಲಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News