×
Ad

ನಟ ಯಶ್ ಕಾರಿಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

Update: 2017-02-28 11:52 IST

ಯಾದಗಿರಿ, ಫೆ.28:  ನಟ ಯಶ್ ಕಾರಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಕಾರು ಜಖಂಗೊಂಡ ಘಟನೆ ಶಹಾಪುರ ತಾಲೂಕಿನ ದೋರನಹಳ್ಳಿ ಬಳಿ ಸೋಮವಾರ ರಾತ್ರಿ  9 ಗಂಟೆಗೆ ನಡೆದಿದೆ.

ಯಾದಗಿರಿ ಮೂಲಕ ಶಹಾಪುರಕ್ಕೆ ಹೋಗುವ ಮಾಗ೯ಮಧ್ಯದಲ್ಲಿ ಸಾವಿರಾರು ಯಶ್ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ನಿಂತಿದ್ದರು. ಈ ವೇಳೆ ಪೊಲೀಸರು ಯಶ್ ಅವರನ್ನು ಭೇಟಿಯಾಗಲು ಅವಕಾಶ ನೀಡದಿರುವುದಕ್ಕೆ ಕೆಲವು ಕಿಡಿಗೇಡಿಗಳು ನಟನ ಕಾರಿಗೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದಾರೆನ್ನಲಾಗಿದೆ.

ಇದರಿಂದ ವಿಚಲಿತರಾದ ನಟ ಯಶ್ ಮತ್ತು ಮಾಜಿ ಸಚಿವ ರಾಜುಗೌಡ ಅವರು ಶಹಾಪುರದಲ್ಲಿ ಕರವೇ ನಿಗದಿಪಡಿಸಿದ ಕಾಯ೯ಕ್ರಮವನ್ನು ಮೊಟಕುಗೊಳಿಸಿ ಕೇವಲ 5 ನಿಮಿಷದಲ್ಲಿ ನಟ ಯಶ್ ಭಾಷಣ ಮುಗಿಸಿ ಹೊರಡಲು ಸಿದ್ದರಾದಾಗ ಅಭಿಮಾನಿಗಳ ನೂಕುನುಗ್ಗಲುಂಟಾಯಿತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ನಟ ಯಶ್ ಮತ್ತು ಮಾಜಿ ಸಚಿವ ರಾಜುಗೌಡ ಅವರನ್ನು ಪೊಲೀಸ್  ಬಂದೋಬಸ್ತ್ ನಲ್ಲಿ ಕಳುಹಿಸಿಕೊಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News