ಜೆನರಿಕ್ ಔಷಧಿ ಸದುಪಯೋಗವಾಗಲಿ

Update: 2017-03-15 19:04 GMT

ಮಾನ್ಯರೆ,

ಉಡುಪಿಯೂ ಸೇರಿದಂತೆ ರಾಜ್ಯದ ಹಲವು ಕಡೆ ಜೆನರಿಕ್ ಮಳಿಗೆಗಳನ್ನು ಸರಕಾರ ಆರಂಭಿಸುತ್ತಿರುವುದು ಶ್ಲಾಘನೀಯ. ಈ ಜೆನರಿಕ್ ಮಳಿಗೆಗಳಲ್ಲಿ ಹೆಚ್ಚಿನ ಔಷಧಿಗಳು ಮಾರುಕಟ್ಟೆ ದರಕ್ಕಿಂತ ಶೇ. 90ರಷ್ಟು ಕಡಿಮೆ ಬೆಲೆಗಳಲ್ಲಿ ದೊರಕುತ್ತಿದ್ದು ಬಡರೋಗಿಗಳಿಗೆ ಆಶಾಕಿರಣವಾಗಿದೆ. ಈಗ ಆರ್ಥಿಕವಾಗಿ ಸಂಕಷ್ಟದ ಪರಿಸ್ಥಿತಿಯಿರುವವರಿಗೆ ರೋಗಗಳೇನಾದರೂ ಆಕ್ರಮಿಸಿದರೆ ಔಷಧಿಗಳ ವೆಚ್ಚದಿಂದಾಗಿಯೇ ಅವರು ಅರ್ಧ ಸಾಯುತ್ತಾರೆ. ಹೀಗಿರುವಾಗ ಜೀವರಕ್ಷಕ ಔಷಧಿಗಳು ಕಡಿಮೆ ಬೆಲೆಯಲ್ಲಿ ದೊರಕಿದರೆ ಅಂತಹವರ ಔಷಧಿಗಳ ವೆಚ್ಚದಲ್ಲಿ ಸಾಕಷ್ಟು ಕಡಿಮೆಯಾಗುತ್ತದೆ.
ಆದರೆ ಈ ಔಷಧಿಗಳು ಜನಸಾಮಾನ್ಯರಿಗೆ ತಲುಪಲು ವೈದ್ಯರ ಪ್ರಾಮಾಣಿಕ ಪ್ರಯತ್ನವೂ ಅತ್ಯಗತ್ಯ. ಖಾಸಗಿ ಔಷಧಿ ಲಾಬಿಗಳಿಗೆ ಮಣಿಯದೆ, ತಮ್ಮ ಬಳಿಗೆ ಬರುವ ರೋಗಿಗಳ ಪರಿಸ್ಥಿತಿ ಅರಿತುಕೊಂಡು, ದುಬಾರಿ ಔಷಧಿಗಳನ್ನು ಬಡರೋಗಿಗಳಿಗೆ ಬರೆಯದೆ ಅಷ್ಟೇ ಪ್ರಭಾವ ಬೀರುವ ಜೆನರಿಕ್ ಔಷಧಿಗಳನ್ನು ಸೂಚಿಸಿದರೆ ಇಂತಹ ಔಷಧಿಗಳು ಸದುಪಯೋಗವಾಗಿ ಜನರಿಗೂ ತಲುಪುತ್ತದೆಯಲ್ಲದೆ ಸರಕಾರದ ಸದುದ್ದೇಶವೂ ಈಡೇರಿದಂತಾಗುತ್ತದೆ.
 

Writer - -ವಿಶ್ವನಾಥ್ ಎಸ್., ಉಡುಪಿ

contributor

Editor - -ವಿಶ್ವನಾಥ್ ಎಸ್., ಉಡುಪಿ

contributor

Similar News