ಬೆಂಗಳೂರು: ಕಟ್ಟಡದಿಂದ ಹಾರಿ ದೇಶದ ಖ್ಯಾತ ಪ್ಲಾಸ್ಟಿಕ್ ಸರ್ಜನ್ ರಿಂದ ಆತ್ಮಹತ್ಯೆ

Update: 2017-03-21 06:43 GMT

ಬೆಂಗಳೂರು, ಮಾ.21: ನಗರದ ಬೊಮ್ಮಸಂದ್ರದಲ್ಲಿರುವ ನಾರಾಯಣ ಹೆಲ್ತ್ ಸಿಟಿಯ ಸ್ಪರ್ಶ್ ಹಾಸ್ಪಿಟಲ್ ಇಲ್ಲಿನ ಪ್ಲಾಸ್ಟಿಕ್ ಹಾಗೂ ಕಾಸ್ಮೆಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರಾಗಿದ್ದ ಡಾ ಅಶೋಕ್ ರಾಜ್ ಕೌಲ್ ಅವರು ಎಚ್ ಎಸ್ ಆರ್ ಲೇಔಟಿನಲ್ಲಿರುವ ತಮ್ಮ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ನ 10ನೆ ಮಹಡಿಯಿಂದ ಕೆಳಕ್ಕೆ ಹಾರಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಮರಳಿದ 54 ವರ್ಷದ ವೈದ್ಯ ಕೌಲ್ ಆತ್ಮಹತ್ಯೆಗೆ ಶರಣಾಗಿದ್ದೇಕೆ ಎಂಬುದು ನಿಗೂಢವಾಗಿದೆ.

ಅಪರಾಹ್ನ ಸುಮಾರು 12.30ಕ್ಕೆ ಮನೆ ತಲುಪಿದ ಅವರು ಐದನೆ ಮಹಡಿಯಲ್ಲಿನ ತಮ್ಮ ಮನೆಗೆ ಹೋಗುವ ಬದಲು 11 ಮಹಡಿಯ ಕಟ್ಟಡದ 10ನೆ ಮಹಡಿಗೆ ಹೋಗಿ ಕಿಟಿಕಿಯಿಮದ ಹೊರಕ್ಕೆ ಹಾರಿದ್ದರು.

ಅವರನ್ನು ಕೂಡಲೇ ನಾರಾಯಣ ಹೃದಯಾಲಯಕ್ಕೆ ಕೊಂಡು ಹೋಗಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.
ಡಾ ಕೌಲ್ ಅವರ ಪತ್ನಿ ಹೊಸಮಠ ಆಸ್ಪತ್ರೆಯಲ್ಲಿ ಅನೆಸ್ತೇಶಿಯಾ ತಜ್ಞೆಯಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ವಿದೇಶದಲ್ಲಿದ್ದರೆ ಇನ್ನೊಬ್ಬ 10ನೆ ತರಗತಿಯಲ್ಲಿ ಕಲಿಯುತ್ತಿದ್ದಾನೆ.

ಡಾ ಕೌಲ್ ಅವರಿಗೆ ಕೌಟುಂಬಿಕ ಸಮಸ್ಯೆಗಳೇನಿರಲಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು ಇದೀಗ ಪೊಲೀಸರು ಅವರ ಫೋನ್ ಕರೆ ಮಾಹಿತಿಗಳನ್ನು ಪರಿಶೀಲಿಸಿ ಸಾವಿಗೆ ಕಾರಣವನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ.

ದೇಶದ ಅತ್ಯುನ್ನತ ಪ್ಲಾಸ್ಟಿಕ್ ಸರ್ಜನ್ ರಲ್ಲಿ ಒಬ್ಬರಾಗಿದ್ದ ಡಾ ಕೌಲ್ ಅವರ ಅಕಾಲಿಕ ಸಾವು ಅವರ ಸಹೋದ್ಯೋಗಿಗಳಿಗೆ ಆಘಾತ ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News