ಆಂಧ್ರದ ಟೆಕ್ಕಿ, ಮಗು ಅಮೆರಿಕದಲ್ಲಿ ನಿಗೂಢ ಸಾವು

Update: 2017-03-25 03:35 GMT

ವಿಜಯವಾಡ, ಮಾ.25: ಆಂಧ್ರಪ್ರದೇಶ ಮೂಲದ 38 ವರ್ಷ ವಯಸ್ಸಿನ ಎಂಜಿನಿಯರ್ ಹಾಗೂ ಆಕೆಯ ಏಳು ವರ್ಷದ ಮಗ ಅಮೆರಿಕದ ನ್ಯೂಜೆರ್ಸಿಯ ಮಾಲ್ಪ್ ಶೇಡ್ ಉಪನಗರದಲ್ಲಿ ನಿಗೂಢವಾಗಿ ಸಾವಿಗೀಡಾಗಿರುವುದು ಬೆಳಕಿಗೆ ಬಂದಿದೆ.

ನರ್ರಾ ಶಶಿಕಲಾ ಹಾಗೂ ಮಗ ಅನೀಶ್ ಸಾಯಿ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಇಬ್ಬರನ್ನೂ ಕತ್ತು ಕೊಯ್ದು ಹತ್ಯೆ ಮಾಡಿರುವ ಸಾಧ್ಯತೆ ಇದೆ.

ಈ ಸಂಬಂಧ ಮಹಿಳೆಯ ಪತಿ ಹನುಮಂತ ರಾವ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಗುರುವಾರ ಸಂಜೆ ಕೆಲಸದಿಂದ ವಾಪಸ್ಸಾದಾಗ ಮೃತದೇಹಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ. ಅವರನ್ನು ಪೊಲೀಸರು ವಶದಲ್ಲಿಟ್ಟುಕೊಂಡಿದ್ದು, ಅವರ ಮೊಬೈಲ್ ಫೋನ್ ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ನ್ಯೂಜೆರ್ಸಿ ಪೊಲೀಸರು ಹೇಳಿದ್ದಾರೆ.

ಪೊಲೀಸರು ರಾವ್ ಅವರನ್ನು ಕರೆದೊಯ್ಯುವ ಮುನ್ನ ಶುಕ್ರವಾರ ಬೆಳಗ್ಗೆ 6 ಗಂಟೆಗೆ ಘಟನೆ ಬಗ್ಗೆ ತಂದೆಗೆ ಹನುಮಂತ ರಾವ್ ಮಾಹಿತಿ ನೀಡಿದ್ದರು. ರಾವ್ ಪೋಷಕರು ಪ್ರಕಾಶಂ ಜಿಲ್ಲೆ ಪರ್ಚೂರು ಮಂಡಲದ ತಿಮ್ಮರಾಜುಪಾಳೆಂ ಗ್ರಾಮದವರು. ಮೃತ ಮಹಿಳೆಯ ತಂದೆ ಸುಂಕರ ವಿಶ್ವೇಶ್ವರ ರಾವ್ ನಿವೃತ್ತ ಶಾಲಾ ಶಿಕ್ಷಕರು. ಅಳಿಯ ಹನುಮಂತ ರಾವ್ ಇಬ್ಬರನ್ನೂ ಹತ್ಯೆ ಮಾಡಿರುವ ಸಾಧ್ಯತೆ ಹೆಚ್ಚು. ಏಕೆಂದರೆ ಆತ ಮತ್ತೊಬ್ಬ ಮಹಿಳೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಅವರು ಆಪಾದಿಸಿದ್ದಾರೆ.

ಅಳಿಯ ಕಳೆದ ಐದು ವರ್ಷದಿಂದ ಮಗಳಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ತಾಯಿ ಕೃಷ್ಣಕುಮಾರಿ ಕೂಡ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News