ವೇಶ್ಯಾವಾಟಿಕೆ ದಂಧೆ; ಹೊರ ರಾಜ್ಯದ 5 ಮಹಿಳೆಯ ರಕ್ಷಣೆ
Update: 2017-04-02 17:54 IST
ಬೆಂಗಳೂರು, ಎ.2: ಹೊರ ರಾಜ್ಯದ ಮಹಿಳೆಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ 12 ಜನರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಹೊರ ರಾಜ್ಯದ 5 ಮಹಿಳೆಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಎಚ್‌ಬಿಆರ್ ಬಡಾವಣೆಯ ರಾಸ್ತಾ ರೆಸ್ಟೋರೆಂಟ್ ಹಿಂಭಾಗದ ಮನೆಯೊಂದರಲ್ಲಿ ಹೊರ ರಾಜ್ಯದ ಮಹಿಳೆಯರನ್ನು ಕರೆತಂದು ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದಾರೆಂಬ ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.
ಬಂಧಿತ ಆರೋಪಿಗಳಿಂದ 1.45 ಲಕ್ಷ ನಗದು ವಶಕ್ಕೆ ಪಡೆದು ಹೊರ ರಾಜ್ಯದ ಐದು ಮಹಿಳೆಯರನ್ನು ರಕ್ಷಿಸಲಾಗಿದೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.