ಸಿರಿಯದಲ್ಲಿನ ಫೆಲೆಸ್ತೀನ್ ಜನಸಂಖ್ಯೆಯಲ್ಲಿ ತೀವ್ರ ಕುಸಿತ

Update: 2017-04-04 14:09 GMT

ಡಮಾಸ್ಕಸ್, ಎ. 4: ಸಿರಿಯದ ಫೆಲೆಸ್ತೀನ್ ನಿರಾಶ್ರಿತರ ಜನಸಂಖ್ಯೆಯು 2011ರಲ್ಲಿ ಸಂಘರ್ಷ ಆರಂಭಗೊಂಡಂದಿನಿಂದ ಐದನೆ ಒಂದು ಭಾಗದಷ್ಟು ಕುಸಿದಿದೆ ಎಂದು ವಿಶ್ವಸಂಸ್ಥೆಯ ಫೆಲೆಸ್ತೀನ್ ನೆರವು ಸಂಸ್ಥೆ ಹೇಳಿದೆ.

ಸಿರಿಯದಲ್ಲಿ ಈಗಲೂ ವಾಸವಾಗಿರುವವರ ಪೈಕಿ ಹೆಚ್ಚಿನವರು ಆರು ವರ್ಷಗಳ ಆಂತರಿಕ ಯುದ್ಧದಿಂದಾಗಿ ನಿರ್ವಸಿತರಾಗಿದ್ದಾರೆ.

ಸಿರಿಯದಲ್ಲಿರುವ ಫೆಲೆಸ್ತೀನೀಯರ ಸಂಖ್ಯೆ ಆಂತರಿಕ ಯುದ್ಧ ಆರಂಭಗೊಳ್ಳುವ ಮೊದಲು ಇದ್ದ 5.6 ಲಕ್ಷದಿಂದ 4.4 ಲಕ್ಷಕ್ಕೆ ಕುಸಿದಿದೆ ಎಂದು ವಿಶ್ವಸಂಸ್ಥೆಯ ಪರಿಹಾರ ಮತ್ತು ನೆರವು ಸಂಸ್ಥೆ (ಯುಎನ್‌ಆರ್‌ಡಬ್ಲುಎ)ಯ ನಿರ್ದೇಶಕ ಪಿಯರ್ ಕ್ರಾಹಂಬಲ್ ಹೇಳಿದ್ದಾರೆ.

‘‘ನಿರ್ವಸತಿ ಎನ್ನುವುದು ಅತ್ಯಂತ ಕಠಿಣ ಅನುಭವ... ಇನ್ನೊಂದು ಮನೆಯನ್ನು ಕಳೆದುಕೊಳ್ಳುವುದು, ಇನ್ನೊಂದು ವಾಸ ಸ್ಥಾನವನ್ನು ಕಳೆದುಕೊಳ್ಳುವುದು...’’ ಎಂದು ಸಿರಿಯದ ಐದು ದಿನಗಳ ಪ್ರವಾಸದ ಮುಕ್ತಾಯದ ವೇಳೆ ಕ್ರಾಹಂಬಲ್ ನುಡಿದರು.

ಸಿರಿಯ ರಾಜದಾನಿ ಡಮಾಸ್ಕಸ್ ಮತ್ತು ಅತ್ಯಂತ ದೊಡ್ಡ ನಗರ ಅಲೆಪ್ಪೊದಲ್ಲಿರುವ ಫೆಲೆಸ್ತೀನಿ ಶಿಬಿರಗಳನ್ನು ನಾಶಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News