ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿನ ನಾಲ್ಕು ಟಯರ್ ಕಳವು !
Update: 2017-04-05 19:14 IST
ಬೆಂಗಳೂರು, ಎ.5: ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿನ ಟಯರ್‌ಗಳನ್ನು ಕಳವು ಮಾಡಿರುವ ಪ್ರಕರಣವೊಂದು ಇಲ್ಲಿನ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಹೊರವಲಯದ ನೆಲಮಂಗಲ ಪಟ್ಟಣದ ಸುಭಾಷ್ ನಗರದ ಚಂದ್ರಶೇಖರ್ ಎಂಬುವರು ಆರು ದಿನಗಳ ಹಿಂದೆಯಷ್ಟೇ ಕಾರನ್ನು ಖರೀದಿ ಮಾಡಿದ್ದರು, ಮಂಗಳವಾರ ರಾತ್ರಿ ತಮ್ಮ ಮನೆ ಮುಂದೆ ರಸ್ತೆಯಲ್ಲಿ ನಿಲ್ಲಿಸಿದ್ದ ವೇಳೆ ದುಷ್ಕರ್ಮಿಗಳು ಕಾರಿನ ನಾಲ್ಕು ಟಯರ್‌ಗಳನ್ನು ಕಳವು ಮಾಡಿದ್ದಾರೆ.
ಬುಧವಾರ ಬೆಳಗ್ಗೆ ಮನೆಯಿಂದ ಹೊರ ಬಂದು ಹೊಸ ಕಾರನ್ನ ನೋಡಿದರೆ ಅದರ, ಟೈರ್‌ಗಳನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ಕಾರಿನ ಮಾಲಕ ಚಂದ್ರಶೇಖರ್ ಇಲ್ಲಿನ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.