×
Ad

2016ನೆ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

Update: 2017-04-11 17:37 IST

ಬೆಂಗಳೂರು, ಎ.11: 2016ನೆ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಬಿ.ಎಂ.ಗಿರಿರಾಜ್ ನಿರ್ದೇಶನದ, ಅಚ್ಯುತ್ ಕುಮಾರ್ ಮುಖ್ಯಭೂಮಿಕೆಯ "ಅಮರಾವತಿ" ಚಿತ್ರ ಮೊದಲ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.

"ರೈಲ್ವೆ ಚಿಲ್ಡ್ರನ್" ಚಿತ್ರ 2ನೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, "ಅಂತರ್ಜಲ" 3ನೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಉಳಿದಂತೆ ರಿಷಬ್ ಶೆಟ್ಟಿ ನಿರ್ದೇಶನದ, ರಕ್ಷಿತ್ ಶೆಟ್ಟಿ ನಾಯಕನಾಗಿ ಅಭಿನಯಿಸಿರುವ "ಕಿರಿಕ್ ಪಾರ್ಟಿ" ಚಿತ್ರ ಅತ್ಯುತ್ತಮ ಮನರಂಜನಾತ್ಮಕ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, "ಮದಿಪು" ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರವಾಗಿ ಹೊರಹೊಮ್ಮಿದೆ. 

"ಮೂಡಲಸೀಮೆಯಲ್ಲಿ" ಅತ್ಯುತ್ತಮ ಸಾಮಾಜಿಕ ಚಿತ್ರವಾಗಿ ಆಯ್ಕೆಯಾಗಿದ್ದರೆ, ಮೊದಲ ನಿರ್ದೇಶನದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ವಿಭಿನ್ನ ಪ್ರಯತ್ನದ "ರಾಮಾ ರಾಮಾ ರೇ" ಚಿತ್ರ ಆಯ್ಕೆಯಾಗಿದೆ. ಎ.24ರಂದು, ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಇತರ ಪ್ರಶಸ್ತಿಗಳ ವಿವರ: ಅತ್ಯುತ್ತಮ ನಟ-ಅಚ್ಯುತ್ ಕುಮಾರ್(ಅಮರಾವತಿ), ಅತ್ಯುತ್ತಮ ನಟಿ-ಶೃತಿ ಹರಿಹರನ್(ಬ್ಯೂಟಿಫುಲ್ ಮನಸುಗಳು), ಅತ್ಯುತ್ತಮ ಪೋಷಕ ನಟ-ನವೀನ್ ಡಿ.ಪಡೀಲ್ (ಕುಡ್ಲ ಕೆಫೆ), ಅತ್ಯುತ್ತಮ ಪೋಷಕ ನಟಿ-ಅಕ್ಷತಾ ಪಾಂಡವಪುರ(ಪಲ್ಲಟ), ಅತ್ಯುತ್ತಮ ಬಾಲನಟ-ಮಾ.ಮನೋಹರ್.ಕೆ(ರೈಲ್ವೆ ಚಿಲ್ಡ್ರನ್), ಅತ್ಯುತ್ತಮ ಬಾಲ ನಟಿ-ಬೇಬಿ ಸಿರಿವಾನಳ್ಳಿ(ಜೀರ್ಜಿಂಬೆ), ಅತ್ಯುತ್ತಮ ಮಕ್ಕಳ ಚಿತ್ರ-ಜೀರ್ಜಿಂಬೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News