ಪ್ರತಿಷ್ಠಿತ ಅಂಬೇಡ್ಕರ್ ಪ್ರಶಸ್ತಿಗೆ ಗುರುಪ್ರಸಾದ್ ಕೆರೆಗೋಡು ಆಯ್ಕೆ
Update: 2017-04-12 15:32 IST
ಬೆಂಗಳೂರು, ಎ.12: ಬಾಬಾ ಸಾಹೇಬ್ ಅಂಬೇಡ್ಕರ್ ರ 126ನೆ ಜನ್ಮದಿನೋತ್ಸವದ ಅಂಗವಾಗಿ ಪ್ರತಿವರ್ಷ ನೀಡಲ್ಪಡುವ ಪ್ರತಿಷ್ಠಿತ ಅಂಬೇಡ್ಕರ್ ಪ್ರಶಸ್ತಿಗೆ ಮಂಡ್ಯ ಮೂಲದ ಗುರುಪ್ರಸಾದ್ ಕೆರೆಗೋಡು ಆಯ್ಕೆಯಾಗಿದ್ದಾರೆ.
ದಲಿತ ಸಂರ್ಘಷ ಸಮಿತಿ ಮುಖಂಡರಾಗಿರುವ ಗುರುಪ್ರಸಾದ್ ಅಂಬೇಡ್ಕರ್ ಆಶಯದಂತೆ ಸಾಕಷ್ಟು ಕಾರ್ಯಗಳನ್ನು ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸೇವೆಯನ್ನು ಪರಿಗಣಿಸಿದ ರಾಜ್ಯಸರಕಾರ ಪ್ರತಿಷ್ಠಿತ ಅಂಬೇಡ್ಕರ್ ಪ್ರಶಸ್ತಿಗೆ ಗುರುಪ್ರಸಾದ್ ರನ್ನು ಆಯ್ಕೆ ಮಾಡಿದೆ. ಪ್ರಶಸ್ತಿ ೫ ಲಕ್ಷ ರೂ., ಬಂಗಾರದ ಪದಕ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.