ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆತಂಕ ಸೃಷ್ಟಿಸಿದ ಹಳೆಬಟ್ಟೆಗಳಿದ್ದ ಗೋಣಿ ಚೀಲ
Update: 2017-04-16 17:37 IST
ಬೆಂಗಳೂರು, ಎ.16: ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಕ್ಕೆ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲಿ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಸ್ ನಿಲ್ದಾಣದಲ್ಲಿ ಹಳೆ ಬಟ್ಟೆಗಳಿದ್ದ ಗೋಣಿಚೀಲವೊಂದು ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು.
ಚಿನ್ನಸ್ವಾಮಿ ಕ್ರೀಡಾಂಗಣಲ್ಲಿ ರವಿವಾರ ಐಪಿಎಲ್ ಟಿ-20 ಹತ್ತನೆ ಆವೃತ್ತಿಯ ಆರ್‌ಸಿಬಿ ಮತ್ತು ಪುಣೆ ತಂಡಗಳ ನಡುವಿನ ಪಂದ್ಯ ಆಯೋಜನೆಗೊಂಡಿತ್ತು. ಈ ವೇಳೆ ಅನುಮಾನಾಸ್ಪದವಾದ ಚೀಲ ಪತ್ತೆಯಾಗಿದೆ ಎಂಬ ಸುದ್ದಿ ತಿಳಿದ ಕೂಡಲೇ ಕಬ್ಬನ್‌ಪಾರ್ಕ್ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು.
ಅಲ್ಲದೆ, ಪೊಲೀಸರು ಪರಿಶೀಲನೆ ನಡೆಸಿದಾಗ ಗೋಣಿಚೀಲದಲ್ಲಿ ಹಳೆಯ ಬೆಡ್‌ಶೀಟ್, ಹಳೇ ಶರ್ಟ್ ಸೇರಿದತೆ ಬಟ್ಟೆಗಳು ಪತ್ತೆಯಾಗಿವೆ. ಆ ಬಳಿಕ ಕ್ರಿಕೆಟ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟರು.