ರೈನಾ ರನ್ ರೈನ್: ಗುಜರಾತ್ ಲಯನ್ಸ್‌ಗೆ 4 ವಿಕೆಟ್‌ಗಳ ಜಯ

Update: 2017-04-21 18:45 GMT

ಕೋಲ್ಕತಾ, ಎ.21: ಹತ್ತನೆ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯ 23ನೆ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ವಿರುದ್ಧ ಗುಜರಾತ್ ಲಯನ್ಸ್ ತಂಡ ನಾಲ್ಕು ವಿಕೆಟ್‌ಗಳ ಜಯ ಗಳಿಸಿದೆ.

ಗೆಲುವಿಗೆ 188 ರನ್‌ಗಳ ಸವಾಲು ಪಡೆದ ಗುಜರಾತ್ ಲಯನ್ಸ್ ತಂಡ ಇನ್ನೂ 10 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ಗುಜರಾತ್ ಲಯನ್ಸ್ ಪರ ನಾಯಕ ಸುರೇಶ್ ರೈನಾ 84 ರನ್ (46ಎ, 9ಬೌ,4ಸಿ) ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಆ್ಯರೊನ್ ಫಿಂಚ್(31), ಬ್ರೆಂಡನ್ ಮೆಕಲಮ್ 33 ರನ್, ರವೀಂದ್ರ ಜಡೇಜ ಔಟಾಗದೆ 19 ರನ್ ಗಳಿಸಿದರು.
ಕೋಲ್ಕತಾ ನೈಟ್ ರೈಡರ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 187 ರನ್ ಗಳಿಸಿತ್ತು.
 
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತಾ ನೈಟ್ ರೈಡರ್ಸ್‌ ತಂಡದ ಪರ ರಾಬಿನ್ ಉತ್ತಪ್ಪ 72 ರನ್(48ಎ, 8ಬೌ,2ಸಿ) , ಸುನೀಲ್ ನರೇನ್42 ರನ್, ನಾಯಕ ಗೌತಮ್ ಗಂಭೀರ್ 33 ರನ್,ಮನೀಷ್ ಪಾಂಡೆ 24 ರನ್, ಯೂಸುಫ್ ಪಠಾಣ್ ಔಟಾಗದೆ 11 ರನ್, ಸೂರ್ಯಕುಮಾರ್ ಯಾದವ್ 1ರನ್, ಶಾಕಿಬ್ ಅಲ್ ಹಸನ್ ಔಟಾಗದೆ 1 ರನ್ ಗಳಿಸಿದರು. ಕೋಲ್ಕತಾ ತಂಡದ ಪ್ರವೀಣ್ ಕುಮಾರ್, ಜೇಮ್ಸ್ ಫಾಕ್ನರ್, ಬಾಸಿಲ್ ಥಾಂಪಿ,ಮತ್ತು ಸುರೇಶ್ ರೈನಾ ತಲಾ 1 ವಿಕೆಟ್ ಪಡೆದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News