-ರಾಥೋಡ ಜಯಪ್ಪನಾಯ್ಕ, ಹೂವಿನ ಹಡಗಲಿ, ಬಳ್ಳಾರಿ

Update: 2017-04-21 18:49 GMT

ಮಾನ್ಯರೆ,

ರಾಜ್ಯದಲ್ಲಿ ಹಲವಾರು ಬೋಗಸ್ ಸಂಸ್ಥೆಗಳು ಅಮಾಯಕ ಜನರಿಗೆ ಅಧಿಕ ಬಡ್ಡಿ ಕೊಡುವುದಾಗಿ ನಂಬಿಸಿ ಅವರಿಂದ ಅಪಾರ ಹಣ ತೆಗೆದುಕೊಂಡು ಮೋಸ ಮಾಡುತ್ತಿರುವ ಹಲವು ಘಟನೆಗಳು ನಡೆಯುತ್ತಿವೆ. ಮೊನ್ನೆಯಷ್ಟೇ ಬೋಗಸ್ ಸಂಸ್ಥೆಯೊಂದು ಧಾರವಾಡದಲ್ಲಿ ಜನರಿಗೆ ಅತೀ ಹೆಚ್ಚು ಬಡ್ಡಿ ಕೊಡುವುದಾಗಿ ನಂಬಿಸಿ, 400 ಕೋಟಿ ರೂ. ಠೇವಣಿ ಮಾಡಿಕೊಂಡು ನಂತರ ಪರಾರಿಯಾಗಿ ಕೆಲವು ದಿನಗಳು ಕಳೆದರೂ ಇನ್ನೂ ಅವರ ಬಂಧನವಾಗಿಲ್ಲ.
 ರಾಜ್ಯದಲ್ಲಿ ಎಲ್ಲ ಕಡೆ ಇಂಥ ಬೋಗಸ್ ಸಂಸ್ಥೆಗಳು ಬಹಳಷ್ಟಿದ್ದು ಅವುಗಳ ಮೇಲೆ ನಿಯಂತ್ರಣ ಹೇರಬೇಕಿದೆ. ಜೊತೆಗೆ ಜನತೆ ಕೂಡಾ ಅತಿಯಾದ ಬಡ್ಡಿಯಾಸೆಗೆ ಬಲಿಯಾಗಿ ಇರುವುದೆಲ್ಲವನ್ನೂ ಕಳೆದುಕೊಳ್ಳುವ ಬದಲು ವಿವೇಚನೆಯಿಂದ ವರ್ತಿಸಿದರೆ ಇಂತಹ ವಂಚನೆಗಳಿಂದ ಬಚಾವಾಗಬಹುದು. ಈ ಪ್ರಕರಣವನ್ನು ಸರಕಾರ ಸಿಐಡಿಗೆ ವಹಿಸಲು ತೀರ್ಮಾನಿಸಿರುವುದು ಸ್ವಾಗತಾರ್ಹ ಕ್ರಮ. ಸರಕಾರ ಇಂತಹ ವಂಚಕರನ್ನು ಕೂಡಲೇ ಬಂಧಿಸಿ ಜನರ ಹಣ ಮರಳಿಸುವ ಪ್ರಯತ್ನ ಮಾಡಲಿ.
 

Writer - ಬೋಗಸ್ ಸಂಸ್ಥೆಗಳ ವಂಚನೆ

contributor

Editor - ಬೋಗಸ್ ಸಂಸ್ಥೆಗಳ ವಂಚನೆ

contributor

Similar News