ಐಪಿಎಲ್:ಮುಂಬೈ ಇಂಡಿಯನ್ಸ್ ಗೆ ರೋಚಕ ಜಯ

Update: 2017-04-22 18:32 GMT


ಮುಂಬೈ, ಎ.22:ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಐಪಿಎಲ್ ಟ್ವೆಂಟಿ-20 ಟೂರ್ನಿಯ 25ನೆ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 15 ರನ್‌ಗಳ ರೋಚಕ ಜಯ ಗಳಿಸಿದೆ.
ಇಲ್ಲಿನ ವಾಂಕೇಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 143 ರನ್‌ಗಳ ಸವಾಲನ್ನು ಪಡೆದ ಡೆಲ್ಲಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 128 ರನ್ ಗಳಿಸಿತು.
ಕ್ರಿಸ್ ಮೊರಿಸ್ ಔಟಾಗದೆ 52 ರನ್ (41ಎ, 5ಬೌ,1ಸಿ) ಮತ್ತು ರಬಾಡ (44) ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಗೆಲುವಿಗೆ ಸುಲಭದ ಸವಾಲು ಪಡೆದಿದ್ದರೂ ಡೆಲ್ಲಿ ಡೇರ್‌ಡೆವಿಲ್ಸ್ ತಂಡ 6.3 ಓವರ್‌ಗಳಲ್ಲಿ 24 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಬಳಿಕ ರಬಾಡ ಮತ್ತು ಕ್ರಿಸ್ ಮೊರಿಸ್ ತಂಡವನ್ನು ಅಧರಿಸಿದರು.

 ಮೆಕ್ಲೀನಘನ್(24ಕ್ಕೆ3), ಬುಮ್ರಾ (21ಕ್ಕೆ 2), ಮತ್ತು ಹಾರ್ದಿಕ್ ಪಾಂಡ್ಯ (23ಕ್ಕೆ 1)ದಾಳಿಗೆ ಸಿಲುಕಿದ ಡೆಲ್ಲಿ ತಂಡದ ಸಂಜು ಸ್ಯಾಮ್ಸನ್(9), ಆದಿತ್ಯ ತಾರೆ (0), ಶ್ರೇಯಸ್ ಅಯ್ಯರ್(6), ಕೆ.ಕೆ.ನಾಯರ್(5), ಕೋರಿ ಆ್ಯಂಡರ್ಸನ್(0), ರಿಷಭ್ ಪಂತ್(0) ಔಟಾಗಿ ಪೆವಿಲಿಯನ್ ಸೇರಿದರು. ಈ ಹಂತದಲ್ಲಿ ತಂಡದ ಬ್ಯಾಟಿಂಗ್‌ನ್ನು ಜವಾಬ್ದಾರಿಯನ್ನು ಹೊತ್ತುಕೊಂಡ ರಬಾಡ ಮತ್ತು ಮೊರಿಸ್ 7 ವಿಕೆಟ್‌ಗೆ 91 ರನ್‌ಗಳ ಜೊತೆಯಾಟ ನೀಡಿದರು.ಇಬ್ಬರೂ ತಂಡವನ್ನು ಗೆಲುವಿನ ದಡ ಸೇರಿಸುವ ನಿಟ್ಟಿನಲ್ಲಿ ಹೋರಾಟ ನಡೆಸಿದರು. ರಬಾಡ ಅವರು 18.4ನೆ ಓವರ್‌ನಲ್ಲಿ ಬುಬ್ರಾ ಎಸೆತದಲ್ಲಿ ಔಟಾದರು. ಬಳಿಕ ತಂಡ ಗೆಲುವಿನ ದಡ ಸೇರಲಿಲ್ಲ.
ಮುಂಬೈ ಇಂಡಿಯನ್ಸ್ 142/8:
ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 142 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ತಂಡದ ಪರ ಜೋ ಬಟ್ಲರ್ 28 ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್ ಆಗಿದೆ.
ಕೀರನ್ ಪೊಲಾರ್ಡ್ 26ರನ್, ಕೃನಾಲ್ ಪಾಂಡ್ಯ 17ರನ್, ಹಾರ್ದಿಕ್ ಪಾಂಡ್ಯ 24 ರನ್‌ಗಳ ಕೊಡುಗೆ ನೀಡಿದರು.
ಪಾರ್ಥಿವ್ ಪಟೇಲ್ 8ರನ್, ಎನ್.ರಾಣಾ 8ರನ್, ರೋಹಿತ್ ಶರ್ಮ 5ರನ್, ಹರ್ಭಜನ್ ಸಿಂಗ್ 2ರನ್, ಮೆಕ್ಲೀನಘನ್ ಔಟಾಗದೆ 1ರನ್ ಮತ್ತು ಜಾನ್ಸನ್ ಔಟಾಗದೆ 7ರನ್ ಗಳಿಸಿದರು.
ಡೆಲ್ಲಿ ತಂಡದ ಪ್ಯಾಟ್ ಕಮಿನ್ಸ್ 20ಕ್ಕೆ 2, ಅಮಿತ್ ಮಿಶ್ರಾ 18ಕ್ಕೆ 2, ರಬಾಡ 30ಕ್ಕೆ 1ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News