ಮುಂಬೈ ಗೆಲುವಿಗೆ ಪುಣೆ ಬ್ರೇಕ್

Update: 2017-04-24 18:39 GMT

 ಮುಂಬೈ, ಎ.24: ಇಲ್ಲಿ ನಡೆದ ಐಪಿಎಲ್‌ನ 28ನೆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪುಣೆ ಇಂದು 3 ರನ್‌ಗಳ ರೋಚಕ ಜಯ ಗಳಿಸಿದೆ.

ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 161 ರನ್‌ಗಳ ಗೆಲುವಿನ ಸವಾಲು ಪಡೆದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 157 ರನ್ ಗಳಿಸಿತು.
19ನೆ ಓವರ್‌ನ ಮುಕ್ತಾಯಕ್ಕೆ ಮುಂಬೈ 5 ವಿಕೆಟ್ ನಷ್ಟದಲ್ಲಿ 144 ರನ್ ಗಳಿಸಿತ್ತು.
ಕೊನೆಯ ಓವರ್‌ನಲ್ಲಿ ಮುಂಬೈ ಗೆಲುವಿಗೆ 17 ರನ್ ಗಳಿಸಬೇಕಿತ್ತು. ಜಯದೇವ್ ಉನದ್ಕಟ್ ಅವರ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ(13) ಅವರು ಸ್ಟೋಕ್ಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಎರಡನೆ ಎಸೆತದಲ್ಲಿ ರೋಹಿತ್ ಶರ್ಮ ಸಿಕ್ಸರ್ ಸಿಡಿಸಿದರು. ಮೂರನೆ ಎಸೆತದಲ್ಲಿ ರನ್ ಬರಲಿಲ್ಲ. ನಾಲ್ಕನೆ ಎಸೆತದಲ್ಲಿ ರೋಹಿತ್ ಶರ್ಮ ಅವರು ಉನದ್ಕಟ್‌ಗೆ ರಿಟರ್ನ್ ಕ್ಯಾಚ್ ನೀಡಿದರು. 5ನೆ ಎಸೆತದಲ್ಲಿ ಮೆಕ್ಲೀನಘನ್ (0)ರನೌಟಾದರು. ಕೊನೆಯ ಎಸೆತದಲ್ಲಿ ಹರ್ಭಜನ್ ಸಿಂಗ್ ಸಿಕ್ಸರ್ ಸಿಡಿಸಿದರು.
ನಾಯಕ ರೋಹಿತ್ ಶರ್ಮ 58ರನ್(39ಎ, 6ಬೌ,3ಸಿ), ಪಾರ್ಥಿವ್ ಪಟೇಲ್ 33ರನ್, ಬಟ್ಲರ್ 17ರನ್, ಕರಣ್ ಶರ್ಮ 11ರನ್,ಪೊಲಾರ್ಡ್ 9ರನ್, ಎನ್.ರಾಣಾ 3ರನ್, ಹರ್ಭಜನ್ ಸಿಂಗ್ ಔಟಾಗದೆ 7 ರನ್ ಗಳಿಸಿದರು.
ಪುಣೆ ತಂಡದ ಉನದ್ಕಟ್ ಮತ್ತು ಸ್ಟೋಕ್ಸ್ ತಲಾ 2 ವಿಕೆಟ್ , ಸುಂದರ್, ಕ್ರಿಸ್ಟಿಯನ್ ಮತ್ತು ತಾಹಿರ್ ತಲಾ 1 ವಿಕೆಟ್ ಪಡೆದರು.
ಪುಣೆ 160/6:ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 160 ರನ್ ಗಳಿಸಿತ್ತು.
ಅಜಿಂಕ್ಯ ರಹಾನೆ ಮತ್ತು ರಾಹುಲ್ ತ್ರಿಪಾಠಿ ಮೊದಲ ವಿಕೆಟ್‌ಗೆ 9.3 ಓವರ್‌ಗಳಲ್ಲಿ 76 ರನ್‌ಗಳ ಜೊತೆಯಾಟ ನೀಡಿದ್ದರು.
ರಹಾನೆ 38ರನ್ ಮತ್ತು ತ್ರಿಪಾಠಿ 45 ರನ್ ಗಳಿಸಿ ಔಟಾದರು. ಇವರನ್ನು ಹೊರತುಪಡಿಸಿದರೆ ನಾಯಕ ಸ್ಟೀವ್ ಸ್ಮಿತ್ 17ರನ್, ಮನೋಜ್ ತಿವಾರಿ 22ರನ್, ಬೆನ್ ಸ್ಟೋಕ್ಸ್ 17 ರನ್, ಎಂಎಸ್ ಧೋನಿ 7ರನ್, ಕ್ರಿಸ್ಟಿಯನ್ ಔಟಾಗದೆ 8ರನ್ ಮತ್ತು ಮತ್ತು ವಿ.ಸುಂದರ್ ಔಟಾಗದೆ 2 ರನ್ ಗಳಿಸಿದರು.
ಮುಂಬೈ ತಂಡದ ಕೆ.ವಿ.ಶರ್ಮ ಮತ್ತು ಜಸ್‌ಪ್ರೀತ್ ಬುಮ್ರಾ ತಲಾ 2 ವಿಕೆಟ್, ಜಾನ್ಸನ್ ಮತ್ತು ಹರ್ಭಜನ್ ಸಿಂಗ್ ತಲಾ 1 ವಿಕೆಟ್ ಪಡೆದರು.
,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News